ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ರಾಷ್ಟ್ರೀಯ ಮಟ್ಟದ ಬೆಸ್ಟ್ ಡೇ ಕಮ್ ಬೋರ್ಡಿಂಗ್ ಸ್ಕೂಲ್ ಅವಾರ್ಡ್

ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ರಾಷ್ಟ್ರೀಯ ಮಟ್ಟದ ಬೆಸ್ಟ್ ಡೇ ಕಮ್ ಬೋರ್ಡಿಂಗ್ ಸ್ಕೂಲ್ ಅವಾರ್ಡ್


ಕುಂದಾಪುರ: ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು ವಿದ್ಯಾರ್ಥಿಗಳಿಗೆ ಶ್ರೇಷ್ಠ ವಿದ್ಯಾದಾನದ ಮೂಲಕ ಸಾಧನೆಗೈಯ್ಯುತ್ತಾ ಇಂದು ವಿಶ್ವಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡಿದೆ. ನ್ಯಾಷನಲ್ ಸ್ಕೂಲ್ ಅವಾರ್ಡ್ 2025 ರಲ್ಲಿ ರಾಷ್ಟ್ರೀಯ ಮಟ್ಟದ ಬೆಸ್ಟ್ ಡೇ ಕಮ್ ಬೋರ್ಡಿಂಗ್ ಸ್ಕೂಲ್ ಅವಾರ್ಡ್ ಮತ್ತು ಬೆಸ್ಟ್ ಪ್ರಿನ್ಸಿಪಾಲ್ ಪ್ರಮೋಟ್ಸ್ ಪ್ರೋಗ್ರೇಸ್ಸಿವ್ ಲರ್ನಿಂಗ್-2025 ಅವಾರ್ಡ್ ಎಂಬ ರಾಷ್ಟ್ರೀಯ ಮಟ್ಟದ ಗೌರವ ಪುರಸ್ಕಾರಕ್ಕೆ ಭಾಜನವಾಯಿತು.  

ಜೂನ್ 30 ರಂದು ಬೆಂಗಳೂರಿನ ಹೆಬ್ಬಾಳದ ಕೋರ್ಟಾಯಟ್ ಮ್ಯಾರಿಯೋಟ್ ನಲ್ಲಿ ನಡೆದ ಸಮಾರಂಭದಲ್ಲಿ ಡಾ. ರಾಜ್ ಕತ್ರೀ, ನಿವೃತ್ತ ಐಎಎಸ್ ಅಧಿಕಾರಿ ಮತ್ತು ಶಿಖಾ ದಿಲನ್ ಎಕ್ಸಿಕ್ಯೂಟಿವ್ ನಿರ್ದೇಶಕರು, ಅವರಿಂದ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪರವಾಗಿ ಸಂಯೋಜಕಿ ಲತಾ ದೇವಾಡಿಗ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

ಈ ಕಾರ್ಯಕ್ರಮದಲ್ಲಿ  ಐಐಟಿ ಬೆಂಗಳೂರು ಆಧ್ಯಕ್ಷೆ ಡಾ. ಸೌಮ್ಯ ನಾರಾಯಣನ್, ಟ್ರೇಡ್ ಕಮಿಷನರ್ ಟ್ರಸ್ಟಿ ಡಾ. ಎಮ್.ಎಸ್. ಪ್ರಕಾಶ್, ರಾಷ್ಟ್ರೀಯ ಶಿಕ್ಷಣ ಸಮಿತಿ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article