ಸಿ.ಟಿ. ರವಿ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದಾಗ ಕಪ್ಪ ಕೊಂಡೊಯ್ಯುತ್ತಿದ್ರಾ?: ಪದ್ಮರಾಜ್ ತಿರುಗೇಟು

ಸಿ.ಟಿ. ರವಿ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದಾಗ ಕಪ್ಪ ಕೊಂಡೊಯ್ಯುತ್ತಿದ್ರಾ?: ಪದ್ಮರಾಜ್ ತಿರುಗೇಟು


ಮಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕಪ್ಪ ಕೊಂಡೊಯ್ಯಲು ರಾಜ್ಯಕ್ಕೆ ಆಗಮಿಸಿದ್ದಾಗಿ ಎಂಎಲೆಎಎಸಿ ಸಿ.ಟಿ. ರವಿ ಆರೋಸಿದ್ದು, ಈ ಹಿಂದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿ.ಟಿ. ರವಿ ಅವರು ತಮ್ಮ ಅಧಿಕಾರವಧಿಯಲ್ಲಿ ಕಪ್ಪ ಕೊಂಡೊಯ್ಯುತ್ತಿದ್ರಾ ಎಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ತಿರುಗೇಟು ನೀಡಿದರು.

ಅವರು ಇಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಸಿ.ಟಿ. ರವಿ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾತ್ರವಲ್ಲದೆ, ತಮಿಳುನಾಡು ಮತ್ತು ಗೋವಾ ರಾಜ್ಯಗಳ ಬಿಜೆಪಿ ಉಸ್ತುವಾರಿಯೂ ಆಗಿದ್ದರು. ಆಗ ಕಪ್ಪ ತೆಗೆದುಕೊಂಡು ಬರಲು ಆ ರಾಜ್ಯಗಳಿಗೆ ಹೋಗುತ್ತಿದ್ದರೋ, ಆ ನೆನಪು ಅವರಿಗೆ ಆಗಿದ್ದು, ಅದನ್ನು ಪುನರುಚ್ಚರಿಸಿದ್ದಾರೆ ಎಂದು ಟೀಕಿಸಿದರು.

ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಧರ್ಮೇಂದ್ರ ಪ್ರಧಾನ್ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಈಗ ರಾಧಾಮೋಹನ್ ಆಗಿದ್ದು, ಅವರು ರಾಜ್ಯಕ್ಕೆ ಆಗಾಗ ಬರುತ್ತಿರುತ್ತಾರೆ. ಅವರು ಬರುತ್ತಿರೋದು ಕಪ್ಪ ಕೊಂಡೊಯ್ಯಲು ಎನ್ನುವುದು ಸಿ.ಟಿ. ರವಿ ಅವರ ಮಾತಿನಿಂದ ಸಂಶಯ ಉಂಟಾಗಿದೆ ಎಂದು ಆರೋಪಿಸಿದರು.

ಸುರ್ಜೇವಾಲಾ ಅವರು ಜನರ ಸಂಕಷ್ಟ ಕೇಳಲ್ಲ ಎಂದೂ ಸಿ.ಟಿ. ರವಿ ಆರೋಪಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದಂತೆ ಜಾರಿಯಾಗಿರುವ ಪ್ರಣಾಳಿಕೆ ಭರವಸೆಗಳು ಸರಿಯಾಗಿ ಅನುಷ್ಠಾನ ಆಗುತ್ತಿದೆಯಾ ಅಂತ ಪರಿಶೀಲನೆ ನಡೆಸಿರೋದು ಸಿ.ಟಿ. ರವಿ ಅವರಿಗೆ ಕಾಣಿಸಿಲ್ಲ ಅನಿಸುತ್ತದೆ, ಅವರು ಯುವ ಕಾಂಗ್ರೆಸ್‌ನಿಂದ ಬಂದವರು ಅವರು ಉಸ್ತುವಾರಿ ವಹಿಸಿಕೊಂಡ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬಂದಿದೆ ಎಂದು ಟೀಕಿಸಿದರು.

ಕೊರೊನಾ ಆರಂಭವಾದಾಗಿನಿಂದ ದಿಢೀರ್ ಹೃದಯಾಘಾತದಿಂದ ಸಾವಿನ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಈಗ ಆರೋಗ್ಯ ಸಚಿವರ ಬಗ್ಗೆ ಬಿಜೆಪಿ ಮುಖಂಡರು ಆರೋಪ ಮಾಡುತ್ತಿದ್ದಾರೆ. 2021-22ರಲ್ಲೇ ಹಠಾತ್ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದ ಬಗ್ಗೆ ಆಗಲೇ ನಾನು ಗಮನ ಸೆಳೆದಿದ್ದೆ. ಆಗ ಕೇಂದ್ರದಲ್ಲೂ, ರಾಜ್ಯದಲ್ಲೂ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಇಂಥ ಸಾವಿನ ಪ್ರಕರಣಗಳಿಗೆ ಕಾರಣ ಹುಡುಕಲು ಏನನ್ನೂ ಮಾಡಲಿಲ್ಲ, ಆಗ ಅವರು ಕತ್ತೆ ಕಾಯುತ್ತಿದ್ದರಾ?. ಆಗ ಏನೂ ಕ್ರಮ ಕೈಗೊಳ್ಳದೆ ಈಗ ಆರೋಪ ಮಾಡುತ್ತಿದ್ದಾರೆ ಎಂದರು.

ಬ್ರಹ್ಮಾವರದಲ್ಲಿ ಹಸುವಿನ ರುಂಡ ಪತ್ತೆಯಾದ ಪ್ರಕರಣದ 24 ಗಂಟೆಯೊಳಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪವನ್ನು ಬೇರೆ ಸಮುದಾಯದವರ ಮೇಲೆ ಹಾಕಿ ಗಲಭೆ ನಡೆಸುವ ಉದ್ದೇಶವಿದ್ದ ಸಾಧ್ಯತೆಯಿದೆ ಎಂದು ಆರೋಪಿಸಿದರು.

ಪುತ್ತೂರಿನಲ್ಲಿ ಯುವತಿಯೊಬ್ಬರಿಗೆ ಅನ್ಯಾಯವಾಗಿದೆ. ಯುವತಿಗೆ ನ್ಯಾಯ ಸಿಗಬೇಕು ಎಂಬುದು ಕಾಂಗ್ರೆಸ್‌ನ ನಿಲುವಾಗಿದ್ದು, ಈ ಕಾರಣದಿಂದಲೇ ರಾಜಕೀಯ ಮಾಡುವ ಕೆಲಸಕ್ಕೆ ಕಾಂಗ್ರೆಸ್ ಕೈಹಾಕಿಲ್ಲ. ಪುತ್ತೂರಿನ ಶಾಸಕರು ಯುವತಿಯ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸಿ ನೀಡಿದ ಹೇಳಿಕೆ ಸರಿಯಾಗಿದೆ. ಅದು ಪಕ್ಷದ ಸಾಮಾಜಿಕ ಬದ್ಧತೆ ಎಂದು ಪದ್ಮರಾಜ್ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಸಲೀಂ, ಚೇತನ್, ಶಬೀರ್ ಸಿದ್ದಕಟ್ಟೆ, ಗಿರೀಶ್ ಶೆಟ್ಟಿ, ನಝೀರ್ ಬಜಾಲ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article