
ಸಿಎ ಪರೀಕ್ಷೆಯಲ್ಲಿ ಪ್ರಜ್ವಲ್ ಹಾಗೂ ಶ್ರೀಯಾ ಶೆಣೈ ಉತ್ತೀರ್ಣ
Tuesday, July 8, 2025
ಮಂಗಳೂರು: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಆಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಹಳೆಯಂಗಡಿ ತೋಕೂರು ನಿವಾಸಿ ಪ್ರಜ್ವಲ್ ಹಾಗೂ ಮಂಗಳೂರು ಬಿಕರ್ನಕಟ್ಟೆ ನಿವಾಸಿ ಶ್ರೀಯಾ ಶೆಣೈ ಅವರು ಉತ್ತೀರ್ಣರಾಗಿದ್ದಾರೆ.
ಪ್ರಜ್ವಲ್ ಅವರು ಹಳೆಯಂಗಡಿ ತೋಕೂರು ನಿವಾಸಿಗಳಾದ ನಾರಾಯಣ ಬಂಗೇರ ಮತ್ತು ಚಂಚಲಾಕ್ಷಿ ದಂಪತಿಗಳ ಪುತ್ರ ಹಾಗೂ ಶ್ರೀಯಾ ಶೆಣೈ ಇವರು ಮಂಗಳೂರು ಬಿಕರ್ನಕಟ್ಟೆ ನಿವಾಸಿಗಳಾದ ಪಿ. ಗಣೇಶ್ ಶೆಣೈ ಮತ್ತು ಶಾಲಿನಿ ಶೆಣೈ ದಂಪತಿಗಳ ಪುತ್ರಿ.
ಪ್ರಜ್ವಲ್ ಹಾಗೂ ಶ್ರೀಯಾ ಶೆಣೈ ಇವರು ಮಂಗಳೂರಿನ ಸಿಎ ಪಿ. ನರೇಂದ್ರ ಪೈ ಅವರ ಮಾರ್ಗದರ್ಶನದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಗೆ ತಯಾರಿ ನಡೆಸಿದ್ದು, ಪ್ರಸ್ತುತ ಇವರಲ್ಲೇ ತರಬೇತಿ ನಡೆಸುತ್ತಿದ್ದಾರೆ.