ಏಳು ದಿನಗಳ ನಿರಂತರ ಭರತನಾಟ್ಯ ಪ್ರದರ್ಶನ: ರೆಮೋನಾ ಪಿರೇರಾ ವಿಶ್ವ ದಾಖಲೆ

ಏಳು ದಿನಗಳ ನಿರಂತರ ಭರತನಾಟ್ಯ ಪ್ರದರ್ಶನ: ರೆಮೋನಾ ಪಿರೇರಾ ವಿಶ್ವ ದಾಖಲೆ


ಮಂಗಳೂರು: ಏಳು ದಿನಗಳಿಂದ ನಿರಂತರ ಭರತನಾಟ್ಯ ಪ್ರದರ್ಶನ ನೀಡಿ ದಾಖಲೆ ಮಾಡುವ ಮೂಲಕ ಮಂಗಳೂರಿನ ರೆಮೋನಾ ಪಿರೇರಾ ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತನ್ನ ಹೆಸರು ನಮೂದಿಸಿದ್ದಾರೆ.

ಸಂತ ಅಲೋಶಿಯಸ್ ವಿ.ವಿ.ಯಲ್ಲಿ ಜು.28 ರಂದು ನಡೆದ ಕಾರ್ಯಕ್ರಮದಲ್ಲಿ ರೆಮೋನಾ ಪಿರೇರಾ ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತಂಡದಿಂದ ಅಧಿಕೃತವಾಗಿ ಘೋಷಣೆ ಪಡೆದುಕೊಂಡು, ಪ್ರಶಸ್ತಿ ಸ್ವೀಕರಿಸಿದರು.


ಮಂಗಳೂರಿನ ಸಂತ ಅಲೋಶಿಯಸ್ ವಿ.ವಿ.ಯ ವಿದ್ಯಾರ್ಥಿನಿ ರೆಮೋನಾ ಅವರು ಇದೇ ಕಾಲೇಜಿನ ರಾಬರ್ಟ್ ಸಿಕ್ವೇರಾ ಹಾಲ್‌ನಲ್ಲಿ ಜು. 21ರಂದು ಬೆಳಗ್ಗೆಯಿಂದ ಆರಂಭಿಸಿದ ಭರತನಾಟ್ಯ ಪ್ರದರ್ಶನ ಹಗಲು-ರಾತ್ರಿ ನಿರಂತರವಾಗಿ ಜು.28 ರ ಮಧ್ಯಾಹ್ನವರೆಗೆ ನಡೆದಿತ್ತು. ಈ ಮೂಲಕ 170 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಲಾತೂರ್‌ನ 16 ವರ್ಷದ ಸುಧೀರ್ ಜಗಪತ್ ಅವರು 2023ರಲ್ಲಿ 127 ಗಂಟೆಗಳ ಕಾಲ ನಿರಂತರ ನೃತ್ಯ ಪ್ರದರ್ಶನ ನೀಡಿರುವುದು ಈವರೆಗಿನ ದಾಖಲೆ. ರೆಮೋನಾ ಪಿರೇರಾ ಅವರು ಈ ದಾಖಲೆಯನ್ನು ಜು.26 ರ ಸಂಜೆಯೇ ಮುರಿದಿದ್ದು ಸೋಮವಾರ ಮಧ್ಯಾಹ್ನದವರೆಗೆ ಭರತನಾಟ್ಯ ಪ್ರದರ್ಶನವನ್ನು ಮುಂದುವರೆಸಿದ್ದರು. ಪ್ರತೀ 3 ಗಂಟೆಗೆ 15 ನಿಮಿಷ ಮಾತ್ರ ಬಿಡುವು ಇರುತ್ತಿತ್ತು. ರೆಮೋನಾ ಅವರ ಸಾಧನೆಗೆ ಜನಪ್ರತಿನಿಧಿಗಳು ಸೇರಿದಂತೆ ಗಣ್ಯರು, ಸಾರ್ವಜನಿಕರು ಅಭಿನಂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article