
ಅಗಲಿದ ಜನನಾಯಕ, ಕಮ್ಯುನಿಸ್ಟ್ ಚಳವಳಿಯ ದಂತಕತೆ ಕಾಮ್ರೇಡ್ ವಿ ಎಸ್ ಅಚ್ಯುತಾನಂದನ್ ರಿಗೆ ಮಂಗಳೂರಿನಲ್ಲಿ ಶ್ರದ್ದಾಂಜಲಿ ಸಭೆ
Wednesday, July 23, 2025
ಮಂಗಳೂರು: ಕೇರಳದ ಮಾಜಿ ಮುಖ್ಯಮಂತ್ರಿ, ಸಿಪಿಐಎಂ ಪಕ್ಷದ ಪೊಲಿಟ್ ಬ್ಯುರೊ ಮಾಜಿ ಸದಸ್ಯ, ಪುನ್ನಪ್ರ ವಯಲಾರ್ ಸಹಿತ ಹಲವು ಚಾರಿತ್ರಿಕ ಹೋರಾಟಗಳನ್ನು ಮುನ್ನಡಿಸಿದ ಧೀಮಂತ ಕಮ್ಯುನಿಸ್ಟ್ ನಾಯಕ ವಿ ಎಸ್ ಅಚ್ಯುತಾನಂದನ್ ಅವರಿಗೆ ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ವತಿಯಿಂದ, ಜಿಲ್ಲಾ ಕಚೇರಿ ಎಕೆಜಿ ಭವನದಲ್ಲಿ ಶ್ರದ್ದಾಂಜಲಿ ಸಭೆ ನಡೆಸಲಾಯಿತು.
ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ವಸಂತ ಆಚಾರಿ, ಸುನಿಲ್ ಕುಮಾರ್ ಬಜಾಲ್, ಹಿರಿಯ ಮುಖಂಡ ವಾಸುದೇವ ಉಚ್ಚಿಲ್ ಶ್ರದ್ದಾಂಜಲಿ ನುಡಿಗಳನ್ನು ಆಡಿದರು. ವಿ.ಎಸ್. ಅಚ್ಯುತಾನಂದನ್ ರ ಮಹತ್ವದ ಕೊಡುಗೆಗಳನ್ನು ಸ್ಮರಿಸಿದರು.
ಮಾಜಿ ಕಾರ್ಪೊರೇಟರ್ ಗಳಾದ ಜಯಂತಿ ಬಿ ಶೆಟ್ಟಿ, ದಯಾನಂದ ಶೆಟ್ಟಿ, ಮುಂದಾಳುಗಳಾದ ಸುಕುಮಾರ್ ತೊಕ್ಕೊಟ್ಟು, ಜೆ ಬಾಲಕೃಷ್ಣ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ವಸಂತಿ ಕುಪ್ಪೆಪದವು, ಶೇಖರ್ ಕುಂದರ್, ಕೃಷ್ಣಪ್ಪ ಸಾಲಿಯಾನ್, ಮಹಾಬಲ ದೆಪ್ಪಲಿಮಾರ್, ಪ್ರಮೀಳಾ ಕೆ, ಅಸುಂತಾ ಡಿ ಸೋಜ, ಪ್ರಮೀಳಾ ದೇವಾಡಿಗ, ನೋಣಯ್ಯ ಗೌಡ, ರವಿಚಂದ್ರ ಕೊಂಚಾಡಿ ಮತ್ತಿತರರು ಉಪಸ್ಥಿತರಿದ್ದರು.