ಇ.ಡಿ. ದುರ್ಬಳಕೆ: ಬಿಜೆಪಿ ಹಣೆಬರಹ ಬಯಲಾಗಿದೆ

ಇ.ಡಿ. ದುರ್ಬಳಕೆ: ಬಿಜೆಪಿ ಹಣೆಬರಹ ಬಯಲಾಗಿದೆ

ಮಂಗಳೂರು: ಜಾರಿ ನಿರ್ದೇಶನಾಲಯ (ಇ.ಡಿ) ಇಲಾಖೆಯನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿರುವ ಬಿಜೆಪಿ ದೇಶದ ಸಂವಿಧಾನವನ್ನು ಗಾಳಿಗೆ ತೂರಿದೆ. ಬಿಜೆಪಿಗೆ ದೇಶದಲ್ಲಿ ಆಡಳಿತ ನಡೆಸಲು ಅರ್ಹತೆ ಇಲ್ಲ. ಸುಪ್ರೀಂ ಕೋರ್ಟ್ ಇಡಿ ದುರ್ಬಳಕೆ ಮಾಡಿರುವುದನ್ನು ಹೇಳಿದ್ದರಿಂದ ಬಿಜೆಪಿ ಹಣೆಬರಹ ಜಗಜ್ಜಾಹೀರಾಗಿದೆ‘ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.

ತನ್ನ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇ.ಡಿಯನ್ನು ಮುಂದಿಟ್ಟುಕೊಂಡು ಮುಡಾ ಹಗರಣದಲ್ಲಿ ಮುಖ್ಯಮಂತ್ರಿಯವರ ಶ್ರೀಮತಿಯವರ ಹೆಸರನ್ನು ದುರ್ಬಳಕೆ ಮಾಡಲಾಯಿತು. ಮುಡಾ ಪ್ರಕರಣದಲ್ಲಿ ಮನಿ ಲ್ಯಾಂಡಿಂಗ್ ನಡೆದಿಲ್ಲ, ಹಣ ತೆಗೆದುಕೊಂಡ ದೂರಿಲ್ಲ ಹೀಗಿರುವಾಗ ಮುಖ್ಯಮಂತ್ರಿಯವರ ಶ್ರೀಮತಿ ವಿರುದ್ಧ ಆರೋಪ ಮಾಡಿದ್ದು ಹೇಗೆ? ಸಿವಿಲ್ ಪ್ರಕರಣದಲ್ಲಿ ಇಡಿ ಮಧ್ಯಪ್ರವೇಶ ಮಾಡುವ ಹಕ್ಕು ಹೊಂದಿಲ್ಲ ಇದನ್ನು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ. ಹೀಗಿರುವಾಗ ಕಾಂಗ್ರೆಸ್ ನಾಯಕರಾದ ಡಿಕೆಶಿವಕುಮಾರ್ ಜಿ ಪರಮೇಶ್ವರ್ ವಿರುದ್ಧ ಇಡಿ ತನಿಖೆ ಹೇಗೆ ಆಯ್ತು? ಇಡಿ ದುರ್ಬಳಕೆ ಮಾಡಿರುವ ಕೇಂದ್ರ ಸರಕಾರದ ವಿರುದ್ಧ ಕೋರ್ಟ್ ಮೆಟ್ಟಿಲು ಏರುತ್ತೇವೆ. ಇದಕ್ಕೆ ದೇಶದ ಗೃಹ ಸಚಿವ ಮತ್ತು ಪ್ರಧಾನಿ ಅವರೇ ನೇರ ಹೊಣೆ“ ಎಂದು ಕಿಡಿಕಾರಿದ್ದಾರೆ. 

’ನಾವು  ಬಿಜೆಪಿ ವಿರುದ್ಧ ಹೋರಾಟ ನಡೆಸುತ್ತೇವೆ, ಈಗ ನಡೆಯುತ್ತಿರುವ ಸಂಸತ್ ಕಲಾಪದಲ್ಲಿ ಈ ಕುರಿತ ಚರ್ಚೆಗೆ ಅವಕಾಶ ನೀಡಬೇಕು. ಜೆಡಿಎಸ್ ಬಿಜೆಪಿ ನಾಯಕರು ಮಾನ ಮರ್ಯಾದೆ ಇದ್ದರೆ ಕ್ಷಮೆ ಯಾಚಿಸಬೇಕು, ಅಧಿಕಾರದಲ್ಲಿ ಇದ್ದವರು ರಾಜೀನಾಮೆ ನೀಡಬೇಕು“ ಎಂದರು. 

”ರಾಜ್ಯ ಸರಕಾರ ಪಂಚ ಗ್ಯಾರಂಟಿ ಜಾರಿಗೆ ತಂದಮೇಲೆ ರಾಜ್ಯದ ಜನರ ತಲಾದಾಯ 2,4,605 ರೂ. ವೃದ್ಧಿ ಆಗಿದೆ. ಇದನ್ನು ಲೋಕಸಭೆಯಲ್ಲಿ ಹಣಕಾಸು ಸಚಿವರು ಲಿಖಿತವಾಗಿ ಹೇಳಿದ್ದಾರೆ, ಈಗ ಹೇಳಿ ಜನ ಎಲ್ಲಿ ಬರ್ಬಾದ್ ಆಗಿದ್ದಾರೆ, ಛಲವಾದಿ ನಾರಾಯಣಸ್ವಾಮಿ, ಆರ್ ಅಶೋಕ್ ಇವರೆಲ್ಲ ಯಾಕೆ ಮಾತಾಡ್ತಿಲ್ಲ? ಇದು ಇಡೀ ದೇಶಕ್ಕೆ ಮಾದರಿಯಾಗಿದೆ. ಹೀಗಿದ್ದರೂ ನೀವು ಪಂಚ ಗ್ಯಾರಂಟಿಯನ್ನು ಟೀಕಿಸುತ್ತೀರಲ್ಲ?“ ಎಂದು ಹೇಳಿದರು. 

ಕಾಂಗ್ರೆಸ್ ನಾಯಕ ಪ್ರಕಾಶ್ ಸಾಲಿಯಾನ್, ಸತೀಶ್ ಪೆಂಗಲ್ ಮೊದಲಾದವರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article