ಹೊಯ್ಗೆ ಬಜಾರ್ ನ ಸರಕಾರಿ ಪ್ರೌಢ ಶಾಲಾ ಮಕ್ಕಳಿಗೆ ಶಾಸಕ ಕಾಮತ್ ಉಪಸ್ಥಿತಿಯಲ್ಲಿ ಪುಸ್ತಕ ವಿತರಣೆ

ಹೊಯ್ಗೆ ಬಜಾರ್ ನ ಸರಕಾರಿ ಪ್ರೌಢ ಶಾಲಾ ಮಕ್ಕಳಿಗೆ ಶಾಸಕ ಕಾಮತ್ ಉಪಸ್ಥಿತಿಯಲ್ಲಿ ಪುಸ್ತಕ ವಿತರಣೆ


ಮಂಗಳೂರು: ದಿ.ಮನೋಜ್ ಕುಮಾರ್ ಶೆಟ್ಟಿಯವರ ಸವಿನೆನಪಿಗಾಗಿ ಕುಟುಂಬದ ವತಿಯಿಂದ ಶಾಸಕ ವೇದವ್ಯಾಸ ಕಾಮತ್ ಅವರ ಉಪಸ್ಥಿತಿಯಲ್ಲಿ ಸರಕಾರಿ ಪ್ರೌಢ ಶಾಲೆ ಹೊಯ್ಗೆ ಬಜಾರ್ ನಲ್ಲಿ ಉಚಿತ ಪುಸ್ತಕ ವಿತರಣೆ ಸಮಾರಂಭವು ನಡೆಯಿತು. 

ಬಳಿಕ ಅವರು ಮಾತನಾಡಿ, ದಿ.ಮನೋಜ್ ಕುಮಾರ್ ರವರು ಭಾರತೀಯ ಜನತಾ ಪಾರ್ಟಿಯಲ್ಲಿ ಸಕ್ರಿಯರಾಗಿದ್ದವರು. ವೈಯಕ್ತಿಕವಾಗಿ ನನಗೂ ಬಹಳ ಆತ್ಮೀಯರಾಗಿದ್ದ ಅವರು ಈ ಭಾಗದ ಪಕ್ಷ ಸಂಘಟನೆಯಲ್ಲಿ ಎಲ್ಲರಿಗೂ ಮಾದರಿಯಾಗುವಂತೆ ತೊಡಗಿಸಿಕೊಂಡಿದ್ದರು. ಸಮಾಜಕ್ಕಾಗಿ ಏನಾದರೂ ಮಾಡಬೇಕು ಎನ್ನುತ್ತಲೇ ಸದಾ ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿದ್ದ ಅವರ ಸೇವಾ ಚಟುವಟಿಕೆಗಳನ್ನು ಇದೀಗ ಕುಟುಂಬಸ್ಥರು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.

ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ನಿಕಟಪೂರ್ವ ಪಾಲಿಕೆ ಸದಸ್ಯೆ ರೇವತಿ ಶ್ಯಾಮ ಸುಂದರ್ ಶೆಟ್ಟಿ, ಮನೋಜ್ ರವರ ಸಹೋದರರಾದ ಸತೀಶ್ ಶೆಟ್ಟಿ, ಸಂತೋಷ್ ಶೆಟ್ಟಿ, ಬಿಜೆಪಿ ಪ್ರಮುಖರಾದ ಲಲ್ಲೇಶ್ ಕುಮಾರ್, ವಿನೋದ್ ಮೆಂಡನ್, ಅನಿಲ್ ಹೊಯ್ಗೆ ಬಜಾರ್, ನಿತಿನ್ ಕುಮಾರ್, ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article