ಬ್ಯಾರಿ ಅಕಾಡೆಮಿಯ ಅಧ್ಯಕ್ಷರ ದ್ವೇಷ ರಾಜಕೀಯ ತಾರತಮ್ಯ ನೀತಿ ಖಂಡನಾರ್ಹ: ರಹೀಮ್ ಉಚ್ಚಿಲ್

ಬ್ಯಾರಿ ಅಕಾಡೆಮಿಯ ಅಧ್ಯಕ್ಷರ ದ್ವೇಷ ರಾಜಕೀಯ ತಾರತಮ್ಯ ನೀತಿ ಖಂಡನಾರ್ಹ: ರಹೀಮ್ ಉಚ್ಚಿಲ್

ಮಂಗಳೂರು: ಬ್ಯಾರಿ ಅಕಾಡೆಮಿಯ ಎಲ್ಲಾ ಅಧ್ಯಕ್ಷರು ತನ್ನ ಅವಧಿಯ ಕೊನೆಯಲ್ಲಿ ತಮ್ಮ ಸಾಧನೆಯ ಕುರಿತು ಪುಸ್ತಕವನ್ನು ರಚಿಸುವುದು ರೂಡಿಯಾಗಿದ್ದು, ಬ್ಯಾರಿ ಅಕಾಡೆಮಿಯ ಎಲ್ಲಾ ಅವದಿಯಲ್ಲೂ ಇದು ಪ್ರಕಟವಾಗಿದೆ. ನಿಕಟಪೂರ್ವ ಅಧ್ಯಕ್ಷರಾಗಿದ್ದ ರಹೀಮ್ ಉಚ್ಚಿಲ್ ಅವರ ತಂಡದ ಸಾಧನೆಯ ನೋಟ ಪುಸ್ತಕ ಪ್ರಕಟವಾಗುವ ಸಮಯ ಅವರು ಪದ ಮುಕ್ತರಾದ ಕಾರಣ ಪ್ರಕಟಣೆಗೆ ತಯಾರಾಗಿದ್ದ ಪುಸ್ತಕ ಪ್ರಕಟಣೆ ಆಗಿರಲಿಲ್ಲ. ಇದೀಗ ನೂತನ ಅಧ್ಯಕ್ಷ ಉಮರ್ ಅವರು ಅಧ್ಯಕ್ಷರಾಗಿ ವರ್ಷಗಳೇ ಕಳೆದರೂ, ಹಲವು ಮನವಿ ಬಳಿಕವೂ ಇದನ್ನು ಪ್ರಕಟಿಸದೇ ಸಾಹಿತ್ಯ ಕ್ಷೇತ್ರದಲ್ಲೂ ಸೇಡಿನ ರಾಜಕೀಯ ನಡೆಸುತ್ತಿದ್ದಾರೆ ಹಾಗೂ ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ರಹೀಮ್ ಉಚ್ಚಿಲ್ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಜನಗಣತಿ ಕಾಲಂನಲ್ಲಿ ಯಾವುದೇ ಭಾಷೆ ನಮೂದು ಆಗಬೇಕಾದರೆ ಆ ಭಾಷೆ ಲಿಪಿ ಹೊಂದಿರಬೇಕು, ರಾಜ್ಯ ಭಾಷೆಯ ಸ್ಥಾನಮಾನ ಹೀಗೇ ಕೆಲವು ಮಾನದಂಡಗಳನ್ನು ಒಳಗೊಂಡಿರಬೇಕು. ಈ ನಿಟ್ಟಿನಲ್ಲಿ ರಹೀಮ್ ಉಚ್ಚಿಲ್ ತನ್ನ ಅವಧಿಯಲ್ಲಿ ಬ್ಯಾರಿ ಲಿಪಿ ಸಂಶೋಧನೆ, ರಚನೆ ಹಾಗೂ ಅನುಷ್ಠಾನ ಸಮಿತಿಯನ್ನು ರಚಿಸಿ ಸರಳವಾಗಿ ಬ್ಯಾರಿ ಲಿಪಿಯನ್ನು ರಚಿಸಿ ಅನಾವರಣೆಗೊಳಿಸಿದ್ದು, ಇದು ಬಳಕೆಗೆ ಅರ್ಹವಾಗಿದೆ. ಈ ಸತ್ಯ ತಿಳಿದಿದ್ದರೂ ಈ ಲಿಪಿಯನ್ನು ಜಗತ್ತಿಗೆ ಪರಿಚಯಿಸದೆ ಇದಕ್ಕೆ ಪ್ರೋತ್ಸಾಹ ನೀಡದೆ ಬ್ಯಾರಿ ಭಾಷೆಗೆ ಮತ್ತು ಬ್ಯಾರಿಗಳಿಗೆ ವಂಚಿಸಿ ಮುಂದಿನ ಜನಗಣತಿ ಕಾಲಂನಲ್ಲಿ ಬ್ಯಾರಿ ಭಾಷೆ ನಮೂದು ಆಗದಂತೆ ತಡೆಯುವ ಎಲ್ಲಾ ಪ್ರಯತ್ನ ನಡೆಸುತ್ತಿದ್ದಾರೆ.

ತಾನು ಅಧಿಕಾರ ಬಿಟ್ಟು ಹೋಗುವಾಗ ಒಂದು ಕೋಟಿ ಮೊತ್ತ ಅಕಾಡೆಮಿಯಲ್ಲಿ ಉಳಿಕೆಯಾಗಿದ್ದು, ಅನುದಾನದ ಕೊರತೆ ಇಲ್ಲದಿದ್ದರೂ ಬ್ಯಾರಿ ಭಾಷೆ ಕಲೆ ಸಾಹಿತ್ಯದ ಅಭಿವೃದ್ಧಿಗೆ ಬಳಸದೆ ಸಾವಿರಾರು ಬ್ಯಾರಿ ಸಂಗೀತ ಕಲಾವಿದರಿಗೆ, ಸಾಹಿತಿಗಳಿಗೆ, ಹಾಡುಗಾರರಿಗೆ ಅವಕಾಶ ನೀಡದೆ ಸಮಯ ವ್ಯರ್ಥಮಾಡಿದ್ದು ತಕ್ಷಣ ಕಲೆ ಸಾಹಿತ್ಯದ ಬಗ್ಗೆ ಒಲವು ಹೊಂದಿರುವ ನೂತನ ಅಧ್ಯಕ್ಷರನ್ನು ನೇಮಿಸಿ, ಬ್ಯಾರಿ ಭಾಷಿಗರಿಗೆ ನ್ಯಾಯ ಒದಗಿಸಬೇಕೆಂದು ರಹೀಮ್ ಉಚ್ಚಿಲ್ ಮುಖ್ಯಮಂತ್ರಿಗಳನ್ನು ಮತ್ತು ಸ್ಪೀಕರ್ ಯು.ಟಿ. ಖಾದರ್ ಅವರನ್ನು ಪತ್ರ ಮೂಲಕ ಆಗ್ರಹಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article