
ದ.ಕ ಜಿಲ್ಲೆಯಲ್ಲಿ ನಾಳೆ ಆರೆಂಜ್ ಅಲರ್ಟ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಬಿಸಿಲು ಮಳೆಯಾಟ. ಅನೇಕ ದಿನಗಳ ಬಳಿಕ ಜಿಲ್ಲೆಯಲ್ಲಿ ಉತ್ತಮ ಬಿಸಿಲು ಕಾಣಿಸಿಕೊಂಡಿದ್ದು, ಜತೆಗೆ ಆಗಾಗ ಉತ್ತಮ ಮಳೆ ಸುರಿದಿದೆ.
ಮಧ್ಯಾಹ್ನದವರೆಗೆ ಬಿಸಿಲು ಮಳೆಯ ವಾತಾವರಣ ಇದ್ದರೆ, ಮಧ್ಯಾಹ್ನದ ಬಳಿಕ ಮೋಡ ಕವಿದು ಮಳೆ ಹನಿಯುತ್ತಿತ್ತು. ಸಂಜೆ ವೇಳೆಗೆ ಗ್ರಾವಾಂತರದಲ್ಲಿ ಉತ್ತಮ ಮಳೆಯಾಗಿದೆ. ದ.ಕ. ಜಿಲ್ಲೆಯಲ್ಲಿ ದಿನವಿಡೀ ಬಿಸಿಲು ಸಹಿತ ಹಗುರದಿಂದ ಉತ್ತಮ ಮಳೆ ಮುಂದುವರಿದಿದೆ. 28ರಂದು ಭಾರತೀಯ ಹವಾಮಾನ ಇಲಾಖೆ ಕರಾವಳಿಯಲ್ಲಿ ಮತ್ತೆ ಆರೆಂಜ್ ಅಲರ್ಟ್ ಘೋಷಿಸಿದೆ.
ದ.ಕ. ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಂದೀಚೆಗೆ ಶನಿವಾರ ಬೆಳಗ್ಗಿನ ವರೆಗೆ ಹಗುರದಲ್ಲಿ ಮಳೆ ಸುರಿದಿದೆ. ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಬೆಳ್ತಂಗಡಿ, ಸುಳ್ಯ, ಬಂಟ್ವಾಳ ಹಾಗೂ ಪುತ್ತೂರುಗಳಲ್ಲಿ ಮಳೆ ಕಡಿಮೆಯಾಗಿ ಸಧಾರಣ ಬಿಸಿ ಮಾತಾವರಣ ಕಂಡುಬಂದಿತ್ತು. ಗ್ರಾಮೀಣ ಭಾಗದಲ್ಲಿ ಸಂಜೆವೇಳೆ ಗಾಳಿ ಸಹಿತ ಮತ್ತೆ ಮಳೆ ಕಾಣಿಸಿದೆ. ಕರಾವಳಿಯಲ್ಲಿ ಭಾನುವಾರ ಬಹುತೇಕ ಕಡೆಗಳಲ್ಲಿ ಸಾದಾರಣ ಮಳೆಯಾಗಲಿದೆ.
ಕರಾವಳಿಯಲ್ಲಿ ಮಳೆ ಕ್ಷೀಣ ಸಾಧ್ಯತೆ
ಸೋಮವಾರ ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜೆಲ್ಲೆಗಳಾದ್ಯಂತ ಬಿಟ್ಟು ಸಾವಾನ್ಯ ಮಳೆಯ ಮುನ್ಸೂಚೆನೆ ಇದೆ. ಬಿಡುವಿನ ವೇಳೆ ಸ್ವಲ್ಪ ಜಾಸ್ತಿ ಮಳೆ ಸಹಿತ ಗಾಳಿಯ ರಭಸವೂ ಸ್ವಲ್ಪ ಹೆಚ್ಚಾಗಬಹುದು. ಈಗಿನಂತೆ ಆಗಸ್ಟ್ 2ರ ತನಕ ಸಾವಾನ್ಯ ಮಳೆ ಮುಂದುವರಿಯುವ ಸಾಧ್ಯತೆಗಳಿವೆ. ನಂತರ ಮೋಡ ಬಿಸಿಲಿನ ವಾತಾವರಣದ ಸೂಚನೆಗಳಿವೆ. ಉತ್ತರ ಭಾರತದ ವಾಯುಭಾರ ಕುಸಿತವು ಮಧ್ಯಪ್ರದೇಶ ತಲುಪಿದ್ದು, ಮುಂದೆ ರಾಜಸ್ಥಾನಕ್ಕೆ ಚಲಿಸುವ ಸಾಧ್ಯತೆಯಿರುವುದರಿಂದ ಕರಾವಳಿ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಮುಂದಿನ ದಿನಗಳಲ್ಲಿ ಕ್ಷೀಣವಾಗಲಿದೆ ಎಂದು ಹವಾಮಾಣ ಇಲಾಖೆ ಮಾಹಿತಿ ನೀಡಿದೆ.
ಮಳೆ ಪ್ರವಾಣ:
ಭಾನುವಾರ ಬೆಳಗ್ಗಿನಿಂದ ಭಾನುವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ 64 ಮಿಮೀ ಮಳೆ ದಾಖಲಾಗಿದೆ. ಬೆಳ್ತಂಗಡಿಯಲ್ಲಿ 63.3 ಮಿಮೀ, ಬಂಟ್ವಾಳ 58.7 ಮಿಮೀ, ಮಂಗಳೂರು 32 ಮಿಮೀ, ಪುತ್ತೂರಲ್ಲಿ 64.7 ಮಿಮೀ, ಸುಳ್ಯ 66.8 ಮಿಮೀ, ಮೂಡುಬಿದಿರೆ 55.1 ಮಿಮೀ, ಕಡಬ 93.6 ಮಿಮೀ, ಮೂಲ್ಕಿ 24.5 ಮಿಮೀ, ಉಳ್ಳಾಲದಲ್ಲಿ 45.3 ಮಿಮೀ ಮಳೆಯಾಗಿದೆ.