
ಆಶ್ರಫ್, ರಹಿಮಾನ್ ಹತ್ಯೆ: ಎಸ್‌ಐಟಿ ತನಿಖೆಗೆ ಒತ್ತಾಯ
ಮಂಗಳೂರು: ಕುಡುಪು ಬಳಿ ಅಶ್ರಫ್ ಗುಂಪು ಹತ್ಯೆ, ಕೊಳ್ತಮಜಲಿನ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಎಸ್‌ಐಟಿಗೆ ಒಪ್ಪಿಸಬೇಕು ಎಂದು ಎಸ್‌ಡಿಪಿಐ ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಸರಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಎಸ್‌ಡಿಪಿಐ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಎನ್‌ಐಎ ತನಿಖೆಯಾಗುತ್ತಿದೆ ಆದರೆ ಕುಡುಪು ಬಳಿ ಅಶ್ರಫ್ ಗುಂಪು ಹತ್ಯೆ, ಕೊಳ್ತಮಜಲಿನ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣ ಪೊಲೀಸ್ ತನಿಖೆಗೆ ಮಾತ್ರ ಸೀಮಿತವಾಗಿದೆ ಹತ್ಯೆ ನಡೆದು ಕೆಲವೇ ತಿಂಗಳುಗಳು ಕಳೆದರೂ ಯಾವುದೇ ಬೆಳವಣಿಗೆಯಾಗಿಲ್ಲ ಹಾಗಾಗಿ ರಾಜ್ಯ ಸರಕಾರ ಇಬ್ಬರ ಹತ್ಯೆ ಪ್ರಕರಣವನ್ನು ರಾಜ್ಯ ಸರಕಾರ ಎಸ್‌ಐಟಿಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜೊತೆಗೆ ಎರಡೂ ಕುಟುಂಬಗಳಿಗೆ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡರು ಎಸ್ಪಿ-ಕಮಿಷನರ್ ಭೇಟಿ ಬಳಿಕ ಪೊಲೀಸರ ಬಿರುಸಿನ ಕಾರ್ಯಾಚರಣೆ ಕಡಿವಾಣ ಬಿದ್ದಿದೆ. ಪೊಲೀಸರು ಕೇವಲ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡುವವರ, ಅಭಿಪ್ರಾಯ ಮಂಡಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ, ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಪೊಲೀಸ್ ಇಲಾಖೆ ಇದೀಗ ಪ್ರತಿಭಟನೆಗೂ ನಿಬಂಧನೆಗಳನ್ನು ಹಾಕುತ್ತಿರುವುದು ನಿಜಕ್ಕೂ ಖಂಡನೀಯ ಎಂದು ಹೇಳಿದರು.