
ಛಾಯಾಗ್ರಾಹಕ ಅಶ್ವತ್ಥಾಮ ಆಚಾರ್ಯ ನಿಧನ
Thursday, July 3, 2025
ಮೂಡುಬಿದಿರೆ: ಸೌತ್‌ಕೆನರಾ ಹೋಂ ಇಂಡಸ್ಟ್ರೀಸ್‌ನ ನಿವೃತ್ತ ಉದ್ಯೋಗಿ, ಕಾಳಿಕಾಂಬಾ ದೇವಸ್ಥಾನದ ಬಳಿಯ ನಿವಾಸಿ, ಸೃಜನಶೀಲ ಛಾಯಾಗ್ರಾಹಕ ಅಶ್ವತ್ಥಾಮ ಆಚಾರ್ಯ (73) ಬುಧವಾರ ರಾತ್ರಿ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.
ಹವ್ಯಾಸಿ ಛಾಯಾಗ್ರಾಹಕರಾಗಿದ್ದ ಅವರು ನಿವೃತ್ತಿಯ ಬಳಿಕ ಮೂಡುಬಿದಿರೆಯಲ್ಲಿ ದುರ್ಗಾ ಸ್ಟುಡಿಯೋ ಸ್ಥಾಪಿಸಿ ಮುನ್ನಡೆಸಿದ್ದರು. ಅವರು ಸೆರೆಹಿಡಿದ ಅಪರೂಪದ ಛಾಯಾಚಿತ್ರಗಳು ಹಲವೆಡೆ ಪ್ರದರ್ಶನಗೊಂಡಿದ್ದವು. ಆನೆಗುಂದಿ ಶ್ರೀಗಳ ದೀಕ್ಷೆ, ಪಟ್ಟಾಭಿಷೇಕ, ಚಾತುರ್ಮಾಸ ಸೇರಿದಂತೆ ವಿವಿಧ ಸಮಾರಂಭಗಳಲ್ಲಿ ಛಾಯಾಗ್ರಹಣ ಸೇವೆ ನೀಡಿದ್ದರು.
ಅವರ ನಿಧನಕ್ಕೆ ಆನೆಗುಂದಿ ಪ್ರತಿಷ್ಠಾನ ಸಂತಾಪ ವ್ಯಕ್ತಪಡಿಸಿದೆ.