
ಇಸ್ಕನ್‌ಗೆ ದೇಣಿಗೆ ನೀಡುವುದಾಗಿ ನಂಬಿಸಿ ವಂಚನೆ
ಮಂಗಳೂರು: ಮಂಗಳೂರಿನ ಇಸ್ಕಾನ್ ದೇವಸ್ಥಾನಕ್ಕೆ ದೇಣಿಗೆ ನೀಡುವುದಾಗಿ ನಂಬಿಸಿ 26 ಸಾವಿರ ರೂ. ವಂಚಿಸಿದ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜೂ.6 ರಂದು ರಾತ್ರಿ ಅಪರಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಆತನನ್ನು ಯೆಯಾಡಿಯಲ್ಲಿ ಬಾಲಾಜಿ ಟ್ರಾನ್ಸ್‌ಪೋರ್ಟ್ ಸಂಸ್ಥೆಯನ್ನು ನಡೆಸುತ್ತಿರುವ ರಾಹುಲ್ ಎಂಬುವುದಾಗಿ ಹೇಳಿ, ಇಸ್ಕಾನ್ ದೇವಸ್ಥಾನಕ್ಕೆ ದೇಣಿಗೆ ನೀಡುವುದಾಗಿ ತಿಳಿಸಿದ ಆತ ತನ್ನ ಮೊಬೈಲ್‌ಗೆ 7.20ಕ್ಕೆ ಇ ರೂ. ಕಳಿಸಿದ್ದು, ನಿಮಗೆ 3 ಸಾವಿರದ ಬದಲು 30 ಸಾವಿರ ಹಣ ವರ್ಗಾವಣೆಯಾಗಿದೆ. ಅದರಲ್ಲಿ 26 ಸಾವಿರ ರೂ.ವನ್ನು ಹಿಂದಿರುಗಿಸುವಂತೆ ತಿಳಿಸಿದ್ದ. ಆತನ ಮಾತನ್ನು ನಂಬಿ ಆತ ಹೇಳಿದ ಖಾತೆಗೆ 26 ಸಾವಿರ ರೂ.ವನ್ನು ಪಾವತಿಸಿದ್ದೆ. ಪತ್ತೆ ಕರೆ ಮಾಡಿದ ಆರೋಪಿ ಮತ್ತೆ 40 ಸಾವಿರ ರೂ. ಹಣ ವಗಾವಣೆಯಾಗಿದ್ದು, ಅದನ್ನೂ ಹಿಂದಿರುಗಿಸುವಂತೆ ಕೋರಿದ್ದ. ಆರೋಪಿ ರಾಹುಲ್‌ನ ಗೂಗುಲ್ ಪೇ ಖಾತೆಯಲ್ಲಿ ಸಂಜಯ್ ಕುಮಾರ್ ಎಂದು ಹೆಸರು ಬಂದಿದೆ.
ಆರೋಪಿ ರಾಹುಲ್ ಹಣ ವಗಾವಣೆಯಾದ ಬಗ್ಗೆ ಸುಳ್ಳು ಸಂದೇಶ ಕಳುಹಿಸಿ ವಂಚಿಸಿದ್ದಾನೆ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.