
ಉಡುಪಿ ದನದ ರುಂಡ ಪ್ರಕರಣ: ಶರಣ್ ಪಂಪ್‌ವೆಲ್ ಗೊಮಾಫಿಯಾ ಮಾಸ್ಟರ್
Friday, July 4, 2025
ಮಂಗಳೂರು: ಉಡುಪಿ ದನದ ರುಂಡ ಪ್ರಕರಣದ ಆರೋಪಿಗಳು ಯಾರು ಎಂದು ಪೊಲೀಸರು ಈಗಾಗಲೇ ತನಿಖೆ ನಡೆಸಿ ಜನತೆಗೆ ಮಾಹಿತಿ ನೀಡಿದ್ದಾರೆ. ಕರಾವಳಿ ಜಿಲ್ಲೆಯಲ್ಲಿ ನಡೆಯುತ್ತಿರುವ ಗೋಮಾಫಿಯಾ, ಅನೈತಿಕೆ ಚಟುವಟಿಕೆ ಒಳಗೊಂಡು ಬಹುಪಾಲು ದ್ವಿದರ್ಜೆ ವ್ಯವಹಾರಗಳಿಗೆ ವಿಎಚ್‌ಪಿ ಡಮ್ಮಿ ಮೇಸ್ತ್ರಿ ಶರಣ್ ಪಂಪ್ವೆಲ್‌ನೇ ಕಾರಣ ಎಂದು ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾತೆತ್ತಿದರೆ ಇಸ್ಲಾಮಿಕ್ ಜಿಹಾದ್ ಎಂದು ಉಚ್ಚರಿಸುವ ಈತ ಮೊದಲು ತಾನು ನಡೆಸುತ್ತಿರುವ ದಂಧೆ ಬಿಟ್ಟು ಅರ್ಚಕ ಸೇವೆಗೆ ಇಳಿಯಲಿ, ಆ ನಂತರ ಇತರ ದಂಧೆ ವಿಷಯದ ಬಗ್ಗೆ ಪ್ರಸ್ತಾಪಿಸಲಿ. ಇಸ್ಲಾಮಿಕ್ ಜಿಹಾದ್ ಪದ ಬಳಕೆ ಮಾಡದೇ ಇದ್ದರೆ ಈತನ ದಿನ ಬೆಳಗಾಗುವುದಿಲ್ಲ. ಇನ್ನು ಮುಂದೆ ಇಂತಹ ಪದಬಳಕೆ ಮಾಡುವ ಬಗ್ಗೆ ಎಚ್ಚರ ವಹಿಸುವುದು ಒಳಿತು ಎಂದು ಕೆ. ಅಶ್ರಫ್ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.