'ಕೃಷ್ಣೋತ್ಸವ-2025' ಆಮಂತ್ರಣ ಪತ್ರಿಕೆ ಬಿಡುಗಡೆ

'ಕೃಷ್ಣೋತ್ಸವ-2025' ಆಮಂತ್ರಣ ಪತ್ರಿಕೆ ಬಿಡುಗಡೆ


ಮೂಡುಬಿದಿರೆ: ಶ್ರೀ ಗೋಪಾಲಕೃಷ್ಣ ದೇವಸ್ಥಾನದ 109 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಜವನೆರ್ ಬೆದ್ರ ಫೌಂಡೇಶನ್ (ರಿ) ಆಶ್ರಯದಲ್ಲಿ "ಕೃಷ್ಣೋತ್ಸವ 2025" ಮಾಜಿ ಸಚಿವ ಅಮರನಾಥ ಶೆಟ್ಟಿ ವೃತ್ತದ ಬಳಿ ನಡೆಯಲಿದ್ದು ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸೋಮವಾರ ಶ್ರೀ ಕ್ಷೇತ್ರ ಪುತ್ತಿಗೆಯಲ್ಲಿ ನಡೆಯಿತು.

ದೇವರಿಗೆ ಪೂಜೆ ಸಲ್ಲಿಸಿದ ನಂತರ ಅನುವಂಶಿಕ ಮುಖ್ಯಸ್ಥ, ಚೌಟರ ಅರಮನೆಯ ಕುಲದೀಪ್ ಎಂ   ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಶಾಸಕ ಉಮನಾಥ ಎ. ಕೋಟ್ಯಾನ್ ಅವರು ಭಾಗವಹಿಸಿ ಮಾತನಾಡಿ ಕೃಷ್ಣೋತ್ಸವ 2025 ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದರು.

ಪುರಸಭೆಯ ಉಪಾಧ್ಯಕ್ಷ  ನಾಗರಾಜ ಪೂಜಾರಿ, ಬಿಜೆಪಿ ಮುಖಂಡ ಕೆ.ಪಿ ಜಗದೀಶ್ ಅಧಿಕಾರಿ , ಉದ್ಯಮಿಗಳಾದ ರಾಜೇಂದ್ರ ಜೈನ್, ಗಂಗಾಧರ್ ಶೆಟ್ಟಿ, ರಾಜೇಶ್ ಕೋಟೆಗಾರ್, ಬಂಟರ ಸಂಘ ಮಹಿಳಾ ಘಟಕ ಅಧ್ಯಕ್ಷೆ ಶೋಭಾ ಹೆಗ್ಡೆ, ಶ್ರೀ ಸಾಯಿ ಡೆವಲಪರ್ ಶಿರ್ತಾಡಿಯ ಅಶ್ವಿತ್,  ಪ್ರಶಾಂತ್ ಗುರುಸ್ವಾಮಿ ಒಂಟಿ ಕಟ್ಟೆ, ಮಂಜುನಾಥ ರೈ, ನಾಗವರ್ಮ ಜೈನ್ ಅವರು ಅತಿಥಿಗಳಾಗಿ ಭಾಗವಹಿಸಿದರು.

ಜವನೆರ್ ಬೆದ್ರ ಫೌಂಡೇಶನ್ (ರಿ) ಸ್ಥಾಪಕ ಅಧ್ಯಕ್ಷ ಅಮರ್ ಕೋಟೆ, ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯಕ್, ಟ್ರಸ್ಟಿ ರಂಜೀತ್ ಶೆಟ್ಟಿ ಯುವ ಸಂಘಟನೆ ಸಂಚಾಲಕ ನಾರಾಯಣ ಪಿದಮಲೆ, ಸಹ ಸಂಚಾಲಕ ರಾಜೇಶ್, ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್ ಪೂಜಾರಿ ,ರಕ್ತನಿಧಿ ಸಂಚಾಲಕ ಮನು ಒಂಟಿ ಕಟ್ಟೆ, ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸಹನಾ ನಾಯಕ್, ಸೌಮ್ಯ ಗಣೇಶ್, ಭಕುತಿ ಭಜನಾ ವೃಂದ ಪ್ರಮುಖರಾದ ಸುಕನ್ಯ, ಅಮಿತಾ ಬನ್ನಡ್ಕ, ಹಾಗೂ ಸಂಘಟನೆ ಸದಸ್ಯರುಗಳಾದ ಲಕ್ಷ್ಮಿ, ರಾಧಾ, ಅಭಿಲಾಶ್, ಗುರು, ಸಚಿನ್ ಪದ್ದೋಡಿ ಶರತ್ ಅಲಂಗಾರು ಹಾಗೂ ಮುಂತಾದರು ಉಪಸ್ಥಿತರಿದ್ದರು. 

ಸಂಘಟನೆಯ ಯುವಜನ ಸಬಲೀಕರಣ ಸಂಚಾಲಕ ಸಂದೀಪ್ ಕೆಲಪುತ್ತಿಗೆ ಕಾರ್ಯಕ್ರಮವನ್ನು ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article