
ಮೂಡುಬಿದಿರೆಯಲ್ಲಿ 3 ಕೋ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ
Tuesday, July 15, 2025
ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ಆರನೇ ವಾರ್ಡಿನ ಕಡೆಪಳ್ಳ ಗಾಂಧಿನಗರದಲ್ಲಿ ರೂ. 20 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ” ಸ್ವಾಮಿ ವಿವೇಕಾನಂದ ಪಾರ್ಕ್” ಹಾಗೂ ಪುರಸಭೆಯಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಷ್ಠಾನಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸವನ್ನು ಶಾಸಕ ಉಮಾನಾಥ ಎ.ಕೋಟ್ಯಾನ್ ಅವರು ಮಂಗಳವಾರ ನೆರವೇರಿಸಿದರು.
ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸ್ವಾತಿ ಪ್ರಭು, ವಾಡ್೯ ಸದಸ್ಯೆ ದಿವ್ಯಾ ಜಗದೀಶ್, ಪುರಸಭಾ ಸದಸ್ಯರಾದ ನವೀನ್ ಶೆಟ್ಟಿ, ಸೌಮ್ಯ ಸಂದೀಪ್ ಶೆಟ್ಟಿ, ಸುಜಾತ, ಮಾಜಿ ಸದಸ್ಯ ಲಕ್ಷ್ಮಣ್ ಪೂಜಾರಿ, ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ನ ಅಧ್ಯಕ್ಷ ಹರೀಶ್ ಎಂ. ಕೆ., ಮುಖ್ಯಾಧಿಕಾರಿ ಇಂದು ಎಂ., ಸಿಬಂಧಿ ಸುಧೀಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.