
ಮೂಡುಬಿದಿರೆ ಜೈನಮಠ, ಬಸದಿಗಳ ನಾಗಬನದಲ್ಲಿ ನಾಗರಪಂಚಮಿ
Tuesday, July 29, 2025
ಮೂಡುಬಿದಿರೆ: ಇಲ್ಲಿನ ಜೈನಬಸದಿಗಳು ಹಾಗೂ ಕಲ್ಸಂಕ ಬಳಿಯಿರುವ ಜೈನಮಠದ ಪ್ರಾಚೀನ ನಾಗಬನದಲ್ಲಿ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಾಗರಪಂಚಮಿ ಆಚರಿಸಲಾಯಿತು.
ಧರ್ಮ ಸಂದೇಶ ನೀಡಿದ ಭಟ್ಟಾರಕ ಸ್ವಾಮೀಜಿ, ಸನಾತನ ಧರ್ಮದಲ್ಲಿ ನಾಗಾರಾಧನೆ ನಾಗನಿಗೆ ಹನ್ನೆರಡು ಆಯಾಮಗಳಿವೆ. ಇವುಗಳೆಂದರೆ, ಅನಂತ, ವಾಸುಕಿ, ಶೇಷ, ಪದ್ಮ, ಕಂಬಳ, ಕಾರ್ಕೊಟ, ಅಶ್ವತ್ರ, ದೃತರಾಷ್ಟ್ರ, ಶಂಖಪಾಲ, ಕಾಳಿಯ, ತಕ್ಷಕ ಮತ್ತು ಪಿಂಗಳ. ಈ ಹನ್ನೆರಡು ಅಂಶಗಳು 12 ತಿಂಗಳಿಗೆ ಸಂಬಂಧಪಟ್ಟದ್ದು ಎಂದು ವೈದಿಕ ನಂಬಿಕೆ ಎಂದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಶೈಲೇಂದ್ರ, ಸಂಜಯಂತ ಕುಮಾರ್, ಪುರೋಹಿತ ಪಾರ್ಶ್ವನಾಥ ಇಂದ್ರ, ವಿರಾಜ್, ಸುವಿಧಿ, ಜಗತ್ಪಾಲ ಇಂದ್ರ ಉಪಸ್ಥಿತರಿದ್ದರು.