
ಅಳಿಯೂರು ಸರಕಾರಿ ಪದವಿ ಪೂರ್ವ ಕಾಲೇಜು ವಿಧ್ಯಾರ್ಥಿ ಸಂಘ ಉಧ್ಟಾಟನೆ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಅಭಿನಂದನೆ
Monday, July 7, 2025
ಮೂಡುಬಿದಿರೆ: ಅಳಿಯೂರು ಪದವಿ ಪೂರ್ವ ಕಾಲೇಜಿನ ನೂತನ ವಿಧ್ಯಾರ್ಥಿ ಸಂಫ ದ ಉಧ್ಟಾಟನೆ ಹಾಗೂ 100% ಫಲಿತಾಂಶ ಪಡೆದ ವಿಧ್ಯಾರ್ಥಿಗಳಿಗೆ ಹಾಗೂ ಕಾರಣಿಕರ್ತರಾದ ಉಪನ್ಯಾಸಕರಿಗೆ ಅಭಿನಂದನಾ ಕಾಯ೯ಕ್ರಮವು ಸೋಮವಾರ ನಡೆಯಿತು.
ಶಾಸಕ ಉಮಾನಾಥ ಎ. ಕೋಟ್ಯಾನ್ ಕಾಯ೯ಕ್ರಮವನ್ನು ಉಧ್ಟಾಟಿಸಿ ಮಾತನಾಡಿ ಅಳಿಯೂರಿನಲ್ಲಿ ಪ್ರಾರಂಭಿಸಿದ ನೂತನ ಕಾಲೇಜು ತಾನು ಪಟ್ಟ ಶ್ರಮಕ್ಕೆ ನೆಮ್ಮದಿಯನ್ನು ಫಲಿತಾಂಶ ಕೊಟ್ಟಿದೆ ಎಂದು ಹೇಳಿ ಉಪನ್ಯಾಸಕರನ್ನು ಅಭಿನಂದಿಸಿದರು. ಪ್ರಾಂಶುಪಾಲ ಹಾಗೂ ಕಾಲೇಜು ಅಭಿವ್ರಧ್ಧಿ ಸಮಿತಿ ಉಪಾಧ್ಯಕ್ಷರು ಪ್ರಸ್ತಾವಿಕವಾಗಿ ಮಾತನಾಡಿದರು.
ರಾಜ್ಯ ಕಬ್ಬಡಿ ತೀರ್ಪುಗಾರರಾಗಿ ಅಯ್ಕೆಯಾದ ಕಾಲೇಜಿನ ಅತಿಥಿ ದೈಹಿಕ ಶಿಕ್ಷಕ ಬಾಸ್ಕರ್ ಅವರನ್ನು ಅಭಿನಂದಿಸಲಾಯಿತು.
ವರ್ಗಾವಣೆಗೊಂಡ ಉಪನ್ಯಾಸಕರನ್ನು ಅಭಿನಂದಿಸಿ ನೂತನ ಉಪನ್ಯಾಸಕರನ್ನು ಸ್ವಾಗತಿಸಿಸಲಾಯಿತು. ದಾನಿಗಳಾದ ರಮಾನಂದ ಸಾಲ್ಯಾನ್, ಹೇಮಾ ಕೆ ಪೂಜಾರಿ, ದರೆಗುಡ್ಡೆ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಪ್ರೌಢಶಾಲೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯರು ಹಾಗೂ ಉಸ್ತುವಾರಿ ಅಧ್ಯಕ್ಷರು ಉಪಸ್ಥಿತರಿದ್ದರು.
ಮಮತಾ ಸ್ವಾಗತಿಸಿದರು. ಉಪನ್ಯಾಸಕಿ ಶಾರಾದ ಕಾರ್ಯಕ್ರಮ ನಿರೂಪಿಸಿದರು. ಅರುಣಾ, ಪೂಜಾ ಸಹಕರಿಸಿದರು. ಉಪನ್ಯಾಸಕ ಸಂತೋಷ್ ವಂದಿಸಿದರು.