
ನಾಳೆ ಗುಲಾಬ್ ಭೂಷಣ ಮುನಿ, ಭಟ್ಟಾರಕ ಸ್ವಾಮೀಜಿ ಚಾತುರ್ಮಾಸ ಕಲಶ ಸ್ಥಾಪನೆ
Tuesday, July 8, 2025
ಮೂಡುಬಿದಿರೆ: ಆಚಾರ್ಯ 108 ಗುಲಾಬ್ ಭೂಷಣ ಮುನಿ ಮಹಾರಾಜ್ ಹಾಗೂ ಮೂಡುಬಿದಿರೆಯ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿಯ 25ನೇ ವರ್ಷದ ಚಾತುರ್ಮಾಸ ಕಲಶ ಸ್ಥಾಪನೆ ಕಾರ್ಯಕ್ರಮ ಜುಲೈ 9ರಂದು ಮೂಡುಬಿದಿರೆ ಜೈನಮಠ ಹಾಗೂ ಶ್ರೀ ಮಹಾವೀರ ಭವನದಲ್ಲಿ ನಡೆಯಲಿದೆ.
ಮಧ್ಯಾಹ್ನ ಶ್ರೀ ದಿಗಂಬರ ಜೈನ ಮಠದಲ್ಲಿ ಅಭಿಷೇಕ ಪೂಜೆಯೊಂದಿಗೆ ಕಲಶ ಸ್ಥಾಪನೆ ವಿಧಿ ವಿಧಾನ ಪ್ರಾರಂಭಗೊಳ್ಳಲಿದೆ. ಬಳಿಕ ಮಧ್ಯಾಹ್ನ 3 ಗಂಟೆಯಿಂದ ಮಹಾವೀರ ಭವನದಲ್ಲಿ ಪಂಚಾಮೃತ ಅಭಿಷೇಕ, ದೇವಶಾಸ್ತç, ಗುರುಪೂಜೆ. ಗಣಧರ ಪೂಜೆ. ಜಿನವಾಣಿ ಪೂಜೆ, ಅರ್ಘ್ಯಾವಳಿ, ಶಾಂತಿಧಾರ, ಣಮೋಕರ ಮಂತ್ರ ಪಠಣಯೊಂದಿಗೆ ಕಲಶ ಸ್ಥಾಪನೆ ನೆರವೇರಲಿದೆ.
ಉಭಯತ್ರಯರಿಗೆ 25ನೇ ಚಾತುರ್ಮಾಸವಾಗಿದ್ದು, ದೀಪಾವಳಿವರೆಗೆ ಕಠಿಣ ವ್ರತ ನಿಯಮಗಳೊಂದಿಗೆ ಚಾತುರ್ಮಾಸ ಆಚರಿಸಲಿರುವರು ಎಂದು ಮಠದ ವ್ಯವಸ್ಥಾಪಕ ಸಂಜಯಂತ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.