
ಉಚಿತ ಸ್ವ ಉದ್ಯೋಗ ತರಬೇತಿ ಶಿಬಿರ ಸಮಾರೋಪ
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಯೋತಿ ರಾಜ್ ತರಬೇತಿ ಪಡೆದ ಮಹಿಳೆಯರ ಕೌಶಲ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಮಹಿಳೆಯರು ವಿಆರ್ ಡಿಎಫ್ ವತಿಯಿಂದ ಪಡೆದ ತರಬೇತಿ ಜ್ಞಾನವನ್ನು ಸ್ವ ಉದ್ಯೋಗ ಮಾಡುವಲ್ಲಿ ತೊಡಗಿಸಿಕೊಳ್ಳ ಬೇಕು, ಬ್ಯಾಂಕ್ ಮಹಿಳೆಯರಿಗೆ ಸ್ವ ಉದ್ಯೋಗ ಮಾಡುವ ಕನಸಿಗೆ ಸಾಲ ಸೌಲಭ್ಯ ನೀಡಿ ಸದಾ ಪ್ರೋತ್ಸಾಹ ನೀಡುತ್ತದೆ ಎಂದರು.
ಬ್ಯಾಂಕ್ ಆಫ್ ಬರೋಡ ಮೂಡುಬಿದಿರೆ ಶಾಖಾ ಜಂಟಿ ವ್ಯವಸ್ಥಾಪಕರಾದ ಶ್ರೀನಾಥ್ ಭಂಡಾರಿ ಮಾತನಾಡಿ ಮಹಿಳೆ ಯರು ಹೆಚ್ಚಿನ ಕೌಶಲ್ಯ ಪಡೆದು ಬೇರೆ ಬೇರೆ ಕಡೆ ಮಾಹಿತಿ ಪಡೆದು ತಮ್ಮ ಸ್ವಂತ ಉದ್ಯೋಗ ಮಾಡಲು ಪ್ರಾರಂಭ ಮಾಡಿ ಎಂದು ಕರೆ ನೀಡಿದರು.
ಕೇಂದ್ರದ ನಿರ್ದೇಶಕಿ ತರಬೇತುದಾರಾದ ಶುಭಲಕ್ಷ್ಮೀ, ಮುಖ್ಯ ಶಿಕ್ಷಕಿ ಶೋಭಾ ಪ್ರಕಾಶ್,ಸಹ ಶಿಕ್ಷಕಿ ನಿಶ್ಚಿಂತ ಜೈನ್ ಮರೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತರಬೇತಿ ಪಡೆದ ಶಿಬಿರಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ಯಶಸ್ವಿಯಾಗಿ ತರಬೇತಿಯನ್ನು ಪೂರೈಸಿದ ಮಹಿಳೆಯರಿಗೆ ಪ್ರಮಾಣ ಪತ್ರವನ್ನು ಗಣ್ಯರು ವಿತರಿಸಿದರು.
ಪ್ರೀತಿ ಮುಂಡ್ಕೂರು ಸ್ವಾಗತಿಸಿದರು. ಜಯಲಕ್ಷ್ಮೀ ಮಿಜಾರ್ ಕಾಯ೯ಕ್ರಮ ನಿರೂಪಿಸಿದರು. ಅನುರಾಗ ಮೂಡುಬಿದಿರೆ ವಂದಿಸಿದರು.