
ಮೂಡುಬಿದಿರೆಯಲ್ಲಿ ಪಾರ್ಶ್ವನಾಥ ಸ್ವಾಮಿ ನಿರ್ವಾಣ ಪೂಜೆ
Thursday, July 31, 2025
ಮೂಡುಬಿದಿರೆ: ಇಲ್ಲಿನ ಶ್ರೀಜೈನ ಮಠ ಹಾಗೂ ಗುರುಬಸದಿಯಲ್ಲಿ ಆಚಾರ್ಯ 108 ಗುಲಾಬ್ ಭೂಷಣ ಮುನಿ ಹಾಗೂ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿ ನಿರ್ವಾಣ ಪೂಜೆ ನಡೆಯಿತು.
ವಿಶೇಷ ಅಭಿಷೇಕ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಧರ್ಮ ಸಂದೇಶ ನೀಡಿ ಭಟ್ಟಾರಕ ಸ್ವಾಮೀಜಿ, ಸತ್ಯ, ಅಹಿಂಸೆ,ಅಚೌರ್ಯ, ಅಪರಿಗ್ರಹ ಎಂಬ ನಾಲ್ಕು ಅಣು ವ್ರತ ಪಸರಿಸಿ, ಭಾರತದಾದ್ಯಂತ ಲೋಕ ಕಲ್ಯಾಣದ ಉಪದೇಶ ಭೋದಿಸಿದವರು ಪಾರ್ಶ್ವನಾಥ ಸ್ವಾಮೀಜಿ ಎಂದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಪ್ರಮುಖರಾದ ಆರತಿ, ದಿವ್ಯಾ ವೀರೇಂದ್ರ, ಸಂಪತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.