13 ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ

13 ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 13 ವಿವಿಧ ಸರ್ಕಾರಿ ಹಿಪ್ರಾ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ನಡೆಸಲು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

ಪುತ್ತೂರು ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳಿಲ್ಲದ ಕಾರಣಕ್ಕೆ ಬಹು ಕಡೆಗಳಿಂದ ತರಗತಿ ಆರಂಭಕ್ಕೆ ಬೇಡಿಕೆ ಬಂದಿತ್ತು. ಪೋಷಕರಿಂದ ಬಂದ ಬೇಡಿಕೆಯನುಸಾರವಾಗಿ ಶಾಸಕ ಅಶೋಕ್ ರೈ ಅವರು ಆಂಗ್ಲ ಮಾಧ್ಯಮ ತರಗತಿಗೆ ಅನುಮತಿ ನೀಡುವಂತೆ ಶೈಕ್ಷಣಿಕ ವರ್ಷ ಆರಂಭಕ್ಕೆ ಮೊದಲು ಮನವಿ ಮಾಡಿ ಸರ್ಕಾರವನ್ನು ಆಗ್ರಹಿಸಿದ್ದರು.

ಅದರಂತೆ  ಸರ್ಕಾರಿ ಹಿಪ್ರಾ ಶಾಲೆಗಳಾದ ಕೈಕಾರ, ನರಿಮೊಗರು, ಭಕ್ತಕೋಡಿ, ಕೆಮ್ಮಾಯಿ, ಪೆರ್ಲಂಪಾಡಿ, ನೆಟ್ಟಣಿಗೆ ಮುಡ್ನೂರು, ಪಾಪೆಮಜಲು, ಮುಂಡೂರು, ಪಾಣಾಜೆ, ವಿಟ್ಲ ಚಂದಳಿಕೆ, ಕೆದಿಲ, ಪಾಟ್ರಕೋಡಿ ಹಾಗೂ ಬೊಳಂತಿಮೊಗ್ರು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗೆ ಅನುಮತಿ ನೀಡಿ ಸರ್ಕಾರ ಆದೇಶವನ್ನು ಹೊರಡಿಸಿದೆ.

ಸರ್ಕಾರದ ಆದೇಶದಂತೆ 13 ಶಾಲೆಗಳಲ್ಲಿ ಈ ಬಾರಿಯ ಶೈಕ್ಷಣಿಕ ವರ್ಷದಿಂದಲೇ ಒಂದನೇ ತರಗತಿ ಆಂಗ್ಲ ಮಾಧ್ಯಮದಲ್ಲಿ ಪ್ರಾರಂಭವಾಗಲಿದೆ. ಈಗಾಗಲೇ ಈ ಶಾಲೆಗಳಲ್ಲಿ ಎಲ್‌ಕೆಜಿ ಯುಕೆಜಿ ತರಗತಿಗಳು ನಡೆಯುತ್ತಿದ್ದವು. ಯುಕೆಜಿ ಮುಗಿಸಿದ ವಿದ್ಯಾರ್ಥಿಗಳನ್ನು ಒಂದನೇ ತರಗತಿಗೆ ದಾಖಲಾತಿ ಮಾಡಿದ್ದರೂ ಸರ್ಕಾರ ಆದೇಶ ಬಂದಿರಲಿಲ್ಲ. ಇಲಾಖೆಯಿಂದ ಅನುಮತಿಯೂ ದೊರೆತಿರಲಿಲ್ಲ. ಈ ಬಗ್ಗೆ ಪೋಷಕರು ಶಾಸಕ ಅಶೋಕ್ ರೈ ಅವರಲ್ಲಿ ಮನವಿ ಮಾಡಿಕೊಂಡಿದ್ದರು.


ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾದ್ಯಮ ಆರಂಭಿಸುವುದು ಇಂದಿನ ಅನಿವಾರ್ಯತೆ. ಕನ್ನಡ ಜತೆಗೆ ಇಂಗ್ಲಿಷ್ ಕಲಿಕೆ ಬಹುಕಾಲದ ಬೇಡಿಕೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಇಲ್ಲ ಎಂಬ ಹಿನ್ನಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸಲು ಮುಂದಾಗಿದ್ದರು. ಇದೀಗ 13 ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಇದ್ದು, ಮೊದಲ ಹಂತದಲ್ಲಿ ಈ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಆರಂಭವಾಗಲಿದೆ. ಸರ್ಕಾರಿ ಶಾಲೆಯ ಬಡವರ್ಗದ ಮಕ್ಕಳೂ ಇಂಗ್ಲೀಷ್ ಮಾದ್ಯಮದಲ್ಲಿ ಕಲಿಯಲು ಇದರಿಂದ ಸಾಧ್ಯವಾಗಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article