ವಿವಾಹವೊಂದೇ ಪರಿಹಾರ..: ಸಂತ್ರಸ್ತೆಗೆ ಧೈರ್ಯ ತುಂಬಿದ ಆಯೋಗದ ಸದಸ್ಯೆ

ವಿವಾಹವೊಂದೇ ಪರಿಹಾರ..: ಸಂತ್ರಸ್ತೆಗೆ ಧೈರ್ಯ ತುಂಬಿದ ಆಯೋಗದ ಸದಸ್ಯೆ


ಪುತ್ತೂರು: ವಂಚನೆಗೊಳಗಾದ ಯುವತಿಗೆ ಅಮ್ಮನ ಸ್ಥಾನದಲ್ಲಿ ನಿಂತು ಅವಳನ್ನು ಮನೆಗೆ ಸೇರಿಸುವ ಜವಾಬ್ದಾರಿ ನನ್ನದಾಗಿದೆ. ಬಡಕುಟುಂಬದ ಈ ತಾಯಿ ಮಗುವಿನ ಸಂಪೂರ್ಣ ಖರ್ಚು ವೆಚ್ಚಗಳನ್ನು ನಾನೇ ಭರಿಸುತ್ತೇನೆ. ಹುಡುಗನಿಗೆ ಮದುವೆ ವಯಸ್ಸಾಗಿಲ್ಲ ಎಂದು ಹೇಳುತ್ತಾರೆ. ಆದರೆ ಈ ರೀತಿ ಮಾಡಲು ಅವನಿಗೆ ಪ್ರಬುದ್ಧತೆ ಇತ್ತಾ. ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಇದಕ್ಕೆ ವಿವಾಹವೊಂದೇ ಪರಿಹಾರ ಎಂದು ಹಿಂದುಳಿದ ವರ್ಗದ ಆಯೋಗದ ಸದಸ್ಯೆ ಪ್ರತಿಭಾ ಕುಲಾಯಿ ಹೇಳಿದರು. 

ಪುತ್ತೂರಿನ ಸಂತ್ರಸ್ತೆ ಯುವತಿ ಮನೆಗೆ ಹಿಂದುಳಿದ ವರ್ಗದ ಆಯೋಗ ಸದಸ್ಯೆ ಶುಕ್ರವಾರ ಸಂಜೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬುವ ಕಾರ್ಯ ಮಾಡಿದರು.

ಆ ನಂತರ ಅವರು ಮಾಧ್ಯಮದ ಜತೆಗೆ ಮಾತನಾಡಿ, ತಪ್ಪು ಮಾಡದ ಮಗುವಿಗೆ ಅಪ್ಪನ ಅಗತ್ಯವಿದೆ. ದುಡ್ಡಿದ್ದರೂ, ಕಾನೂನಿಗಿಂತ ಯಾರೂ ಮೇಲಲ್ಲ. ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿಯವರಲ್ಲಿ ಈ ಬಗ್ಗೆ ಮಾತುಕತೆಯನ್ನು ನಡೆಸಿದ್ದೇನೆ. ಆಯೋಗದ ಅಧಿಕಾರಿಗಳಿಂದ ಅಗತ್ಯ ನೆರವು ಲಭಿಸಲಿದೆ. ಹಿಂದುಳಿದ ವರ್ಗದ ಇಲಾಖೆಯಿಂದಲೂ ಅಗತ್ಯ ವ್ಯವಸ್ಥೆಮಾಡಲಾಗುವುದು. ಯುವಕನ ಪತ್ತೆ ವಿಚಾರದಲ್ಲಿ ತಾಯಿ ಕರೆದುಕೊಂಡು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಲ್ಲಿ ಮಾತುಕತೆ ನಡೆಸುತ್ತೇನೆ. ಸಂಧಾನಕ್ಕೆ ಒಪ್ಪದಿದ್ದರೆ ಕೊನೆಯಲ್ಲಿ ಹೆಣ್ಣುಮಕ್ಕಳಿಗೂ ಬೇಕಾದಷ್ಟು ಕಾನೂನಿನ ಅವಕಾಶಗಳಿವೆ ಎಂದರು.

ಮಗನ ತಪ್ಪನ್ನು ಸರಿಪಡಿಸಬೇಕು:

ದಕ್ಷಿಣ ಕನ್ನಡದಂತಹ ಜಿಲ್ಲೆಯಲ್ಲಿ ಇಂತಹ ಘಟನೆ ನಡೆಯುವುದು ಬೇಸರ ತಂದಿದೆ. ನ್ಯಾಯ ಎಂಬುದು ಸಿಕ್ಕಿಲ್ಲ. ಎರಡು ವ್ಯಕ್ತಿಗಳ ಜೀವನದ ಪ್ರಶ್ನೆಯಾದ ಕಾರಣ ತಪ್ಪಿತಸ್ಥರಿಗೆ ಶಿಕ್ಷೆಯಾಗಬಾರದು. ಇಬ್ಬರಿಂದ ತಪ್ಪಾಗಿದ್ದು, ಒಪ್ಪಿಸಿ ಮದುವೆ ಮೂಲಕ ಅದನ್ನು ಸರಿಪಡಿಸಬೇಕಾಗಿದೆ. ಹುಡುಗನ ತಾಯಿ ಶಿಕ್ಷಕಿಯಾಗಿ ಹಲವು ಮಕ್ಕಳ ಜೀವನ ರೂಪಿಸಿದವರು. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯ ಮಗ ತಪ್ಪು ಮಾಡಿದ್ದು, ಅದನ್ನು ಸರಿಪಡಿಸುವುದು ಅವರ ಧರ್ಮವಾಗಿದೆ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article