
ಶ್ರೀದೇವಿ ಪ್ರಭು ಅವರಿಗೆ ಪಿಎಚ್‌ಡಿ ಪದವಿ
Monday, July 7, 2025
ಶಿರ್ವ: ಮಣಿಪಾಲ ಮಾಹೆ ಸಮೂಹ ಸಂಸ್ಥೆಗಳಲ್ಲಿ ಒಂದಾದ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್‌ನ ಡಿಪಾರ್ಟ್ಮೆಂಟ್ ಆಫ್ ಕಾರ್ಡಿಯೋ ವ್ಯಾಸ್ಕುಲರ್ ಟೆಕ್ನಾಲಾಜಿ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀದೇವಿ ಪ್ರಭು ಇವರಿಗೆ ಮಾಹೆ ವಿಶ್ವವಿದ್ಯಾಲಯ ಡಾಕ್ಟರೇಟ್(ಪಿ.ಎಚ್.ಡಿ) ಪದವಿ ಪ್ರದಾನ ಮಾಡಿದೆ.
ಇವರು ಡಾ. ಟೋಮ್ ದೇವಾಸಿಯ, ಡಾ. ಅನ್ನಪೂರ್ಣ ಮತ್ತು ಡಾ. ಕೃಷ್ಣಾನಂದ ನಾಯಕ್ ಅವರ ಮಾರ್ಗದರ್ಶನದಲ್ಲಿ ‘ಹೃದಯ ವೈಫಲ್ಯ ಇರುವ ಹೃದ್ರೋಗಿಗಳಿಗೆ ನಿರಂತರ ಯೋಗಾಭ್ಯಾಸದಿಂದ ದೊರಕುವ ಪ್ರಯೋಜನದ ಬಗೆಗಿನ ಅಧ್ಯಯನ’ ಮೇಲಿನ ಸಂಶೋಧನಾ ಪ್ರಬಂಧಕ್ಕೆ ಈ ಪದವಿ ಲಭಿಸಿದೆ.