
ಕುಕ್ಕೆಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಭೇಟಿ
Sunday, July 20, 2025
ಸುಬ್ರಹ್ಮಣ್ಯ: ಭಾರತದ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ತಮ್ಮ ಪತ್ನಿ ಶಿವಮಾಲ ಹಾಗೂ ಹೈಕೋರ್ಟ್ ನ್ಯಾಯಮೂರ್ತಿ ಲಲಿತಾ ಕನ್ನೆಘಂಟಿ ಅವರ ಪತಿ ವಿಜಯಪ್ರಸಾದ್ ಕನ್ನೆಘಂಟಿಯವರೊಂದಿಗೆ ಇಂದು ಪವಿತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರು ನ್ಯಾಯಮೂರ್ತಿಗಳನ್ನು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ದೇವಸ್ಥಾನದ ಗಜರಾಣಿ ಯಶಸ್ವಿನಿ (ಆನೆ)ಯ ಮೂಲಕ ನ್ಯಾಯಮೂರ್ತಿಗೆ ಗೌರವ ಸಲ್ಲಿಸಲಾಯಿತು.
ನ್ಯಾಯಮೂರ್ತಿ ರಮಣ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆಗಳನ್ನು ಸಲ್ಲಿಸಿದರು. ದೇವಳದ ಆಂತರಿಕ ಪ್ರಾಂಗಣದಲ್ಲೂ ಅವರು ಕೆಲ ಕಾಲ ಸಮಯ ಕಳೆಯುತ್ತ ಧ್ಯಾನದಲ್ಲಿ ತೊಡಗಿದ್ದರು.
ಈ ಭೇಟಿಯ ಸಂದರ್ಭದಲ್ಲಿ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎ.ಸುರಾಜ್, ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕಾರ್ತಿಕ್, ದೇವಸ್ಥಾನದ ಶಿಷ್ಟಾಚಾರ ವಿಭಾಗದ ಜಯರಾಮ್, ಪ್ರಮೋದ್, ನೇಮಿಚಂದ್ರ, ಪ್ರಮುಖರಾದ ಕಿಶೋರ್ ಆರಂಪಾಡಿ, ಕಡಬ ದುರ್ಗಾಂಬಾ ದೇವಸ್ಥಾನದ ಸೋಮಪ್ಪ ನಾಯ್ಕ್,
ದೇವಸ್ಥಾನ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹಾಗೂ ಹಲವಾರು ಭಕ್ತರು ಉಪಸ್ಥಿತರಿದ್ದರು.
ಈ ಭಕ್ತಿಧಾರಿತ ನೆನೆಯುಸುವ ಸಂಭ್ರಮದ ಕ್ಷಣಗಳು ಭಕ್ತರಿಗೆ ವಿಶೇಷ ಅನುಭವ ನೀಡಿದವು.