
ಅಂಬ್ಯುಲೆನ್ಸ್ ಚಾಲಕ ಹೊನ್ನಪ್ಪ ದೇವರಗದ್ದೆ ಕಾಣೆ ಪ್ರಕರಣ: ತೀವ್ರ ಶೋಧ
ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಯೋಗಿ ಅಂಬ್ಯುಲೆನ್ಸ್ ಚಾಲಕ ಹೊನ್ನಪ್ಪ ದೇವರಗದ್ದೆ ಜು.22 ರಂದು ನಾಪತ್ತೆ ಆಗಿದ್ದು ಅಗ್ರಹಾರ ಬಳಿ ಕುಮಾರಧಾರ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು ಇಂದು ಬೆಳಗ್ಗೆಯಿಂದ ಎರಡನೇ ದಿನದ ಶೋಧ ಕಾರ್ಯ ಆರಂಭವಾಗಿದೆ.
ಎಸ್.ಡಿ.ಆರ್.ಎಫ್, ಅಗ್ನಿಶಾಮಕ, ಈಶ್ವರ ಮಲ್ಪೆ ತಂಡ, ಅಂಬ್ಯುಲೆನ್ಸ್ ಚಾಲಕರ, ಮಾಲಕರ ಸಂಘ ದಿಂದ ಶೋಧ ಕಾರ್ಯ ನಡೆಯುತ್ತಿದೆ. ಜು.23 ರ ತಡರಾತ್ರಿ ವರಗೆ ಅಂಬ್ಯುಲೆನ್ಸ್ ಚಾಲಕರ , ಮಾಲಕರ ಸಂಘ ವತಿಯಿಂದ ಲೈಟ್ ಹಾಕಿ ಶೋಧ ನಡೆಸಿದರು.
ಸುಬ್ರಹ್ಮಣ್ಯದ ವಿಪತ್ತು ಕಾರ್ಯ ನಿರ್ವಹಣಾ ತಂಡದ ಸುಮಾರು 30 ಯುವಕರು ಕಳೆದ ಮೂರು ದಿನಗಳಿಂದ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಿಂದ ಊಟ ಹಾಗೂ ತಿಂಡಿಯ ವ್ಯವಸ್ಥೆಯನ್ನು ಒದಗಿಸಿರುತ್ತಾರೆ. ಸುಬ್ರಮಣ್ಯದ ಡಾ. ರವಿ ಕಕ್ಕೆಪದವು ಅವರು ಕೂಡ ಸ್ವತಃ ತಾವು ಕಾರ್ಯಚರಣೆಯಲ್ಲಿ ತೊಡಗಿದರೊಂದಿಗೆ ತಂಡಕ್ಕೆ ಭೋಜನದ ವ್ಯವಸ್ಥೆಯನ್ನು ಮಾಡಿರುತ್ತಾರೆ. ಇಂದು ಸುಬ್ರಮಣ್ಯ ಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಕಾರ್ಯಾಚರಣೆಗೆ ಸ್ವಲ್ಪ ತೊಡಕು ಕೂಡ ಉಂಟಾಗಿತ್ತು ಇಂದಿನ ಕಾರ್ಯಾಚರಣೆಯನ್ನು ನಿಲ್ಲಿಸಿ ನಾಳೆಗೆ ಮತ್ತೆ ಆರಂಭವಾಗಲಿದೆ.