
ರಸ್ತೆ ಬದಿ ಕುಸಿತ-ಸಂಪರ್ಕ ಕಡಿತ ಭೀತಿ
Tuesday, July 29, 2025
ಸುಬ್ರಹ್ಮಣ್ಯ: ರಸ್ತೆ ಬದಿಯ ಮಣ್ಣು ಕುಸಿಯಲು ಆರಂಭಿಸಿದ್ದು, ರಸ್ತೆ ಕಡಿತ ಭೀತಿ ಎದುರಾಗಿರುವ ಘಟನೆ ಸುಬ್ರಹ್ಮಣ್ಯದ ನೂಚಿಲ ಎಂಬಲ್ಲಿ ಸಂಭವಿಸಿದೆ.
ಸುಬ್ರಹ್ಮಣ್ಯದ ನೂಚಿಲ ಎಂಬಲ್ಲಿ ಸುಮಾರು 10 ಮನೆಗಳಿಗೆ ಸಂಪರ್ಕಿಸುವ ಪಂಚಾಯತ್ ರಸ್ತೆಯ ಎಡಭಾಗದಲ್ಲಿ ಸುಮಾರು 30-35 ಫೀಟ್‌ನಷ್ಟು ಆಳವಾದ ಕಡಿದಾದ ಬರೆ ನಿರಂತರ ಸುರಿಯುವ ಮಳೆಯಿಂದ ಕುಸಿತಗೊಂಡಿದ್ದು, ಇನ್ನಷ್ಟು ಕುಸಿತದ ಭೀತಿಯಲ್ಲಿದೆ. ಇಲ್ಲಿ ಇನ್ನಷ್ಟು ರಸ್ತೆ ಬದಿ ಕುಸಿದಲ್ಲಿ ಸುಮಾರು 10 ಮನೆಗಳಿಗೆ ಸಂಪರ್ಕ ರಸ್ತೆ ಕಡಿತವಾಗಲಿದೆ.