
ಏಕಾಏಕಿ ಕುಸಿದು ವಿದ್ಯಾರ್ಥಿ ಸಾವು
Wednesday, July 16, 2025
ಉಡುಪಿ: ಏಕಾಏಕಿ ಕುಸಿದು ಬಿದ್ದು ೬ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಪೆರಂಪಳ್ಳಿಯ ಖಾಸಗಿ ಶಾಲೆಯ 6ನೇ ತರಗತಿಯಲ್ಲಿ ಕಲಿಯುತ್ತಿದ್ದ ಗ್ಯಾನ್ಸ್ ಕ್ಯಾಥಲ್ ಡಿ’ಸೋಜಾ ಮೃತ ಬಾಲಕ.
ಜು.15ರಂದು ಬೆಳಿಗ್ಗೆ ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆಗೆ ಬಾಲಕ ಮೃತಪಟ್ಟಿದ್ದ. ಅಥ ತೊಟ್ಟಂನ ಆಶ್ವಿನ್ ಮತ್ತು ಸರಿತಾ ಡಿ’ಸೋಜಾ ದಂಪತಿ ಪುತ್ರ.