ಅಶೋಕನಗರ, ಮುಳಿಕ್ಕಾರಿಗೆ ರಾಜ್ಯಸಭಾ ನಿಧಿಯಿಂದ 2.91 ಕೋ.ರೂ. ಮೀಸಲಿಟ್ಟ ಡಾ.ಹೆಗ್ಗಡೆ

ಅಶೋಕನಗರ, ಮುಳಿಕ್ಕಾರಿಗೆ ರಾಜ್ಯಸಭಾ ನಿಧಿಯಿಂದ 2.91 ಕೋ.ರೂ. ಮೀಸಲಿಟ್ಟ ಡಾ.ಹೆಗ್ಗಡೆ


ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ನಾಡಿನೆಲ್ಲೆಡೆಗಳಿಂದ ಅತೀ ಹೆಚ್ಚು ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತಿರುವ ಕ್ಷೇತ್ರವಾಗಿದ್ದು, ಅಭಿವೃದ್ಧಿ ದೃಷ್ಟಿಯಲ್ಲೂ ಬಹಳಷ್ಟು ಮುಂದಿದೆ. ಗ್ರಾಮ 8 ವಾರ್ಡ್‌ಗಳನ್ನು ಹೊಂದಿದ್ದು 7083 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ ಹೊಂದಿದೆ. 1150 ಎಕ್ರೆ ಕೃಷಿ ಭೂಮಿಯನ್ನು ಹೊಂದಿದ್ದು, ಮಂಡಲ ಪಂಚಾಯತ್‌ನಿಂದ ಆರಂಭಿಸಿ ಗ್ರಾಮದ ಅಭಿವೃದ್ಧಿ ಜನರಿಗೆ ತಲುಪಿಸುವ ನೆಲೆಯಲ್ಲಿ ಕಳೆದ ಐದು ವರ್ಷಗಳಿಂದ ಪಾರದರ್ಶಕವಾಗಿ,ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದ್ದೇವೆ ಎಂದು ಗ್ರಾ.ಪಂ. ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಹೇಳಿದರು.

ಗ್ರಾ.ಪಂ. ವತಿಯಿಂದ ಸ್ವಚ್ಛತೆ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದೇವೆ. ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಮಾಡುವ ನೆಲೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಅ.2 ರಂದು 2013 ರಲ್ಲಿ ರಾಜ್ಯಸಭಾ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಏಕಬಳಕೆ ಮುಕ್ತ ಗ್ರಾಮವಾಗಿ ಘೋಷಣೆ ಮಾಡಿದ ಮೂಲಕ ನಿರಂತರ ಕೆಲಸ ಮಾಡುತ್ತಾ ಬಂದಿದ್ದೇವೆ. ಗ್ರಾಮದಲ್ಲಿ 9818 ಜನಸಂಖ್ಯೆ ಹೊಂದಿದ್ದು, 2858 ಕುಟುಂಬಗಳಿವೆ. 2518 ವಾಸ್ತವ್ಯ ಮನೆಗಳಿದ್ದು, 484 ವಾಣಿಜ್ಯ ಕಟ್ಟಡಗಳಿವೆ. ಗ್ರಾ.ಪಂ. ನಿರ್ಮಲ ಗ್ರಾಮ ಪುರಸ್ಕಾರ, ಗಾಂಧಿ ಗ್ರಾಮ ಪುರಸ್ಕಾರ, ಸ್ವಚ್ಛತಾ ಹೀ ಸೇವಾ, ಡಾಕ್ಟರ್ ಶಿವರಾಮ ಕಾರಂತ ಪ್ರಶಸ್ತಿ ಪಡೆದಿದೆ. ತೆರಿಗೆ ಸಂಗ್ರಹದಲ್ಲಿ ದ.ಕ. ಜಿಲ್ಲೆಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಒಟ್ಟು 1.55 ಕೋ.ರೂ. ತೆರಿಗೆಯಲ್ಲಿ 1.06 ಕೋ.ರೂ. ಸಂಗ್ರಹಿಸಲಾಗಿದೆ.

ಕೇಂದ್ರ ಸರಕಾರದ 15ನೇ ಹಣಕಾಸು ಯೋಜನೆಯಡಿ 1.18 ಕೋ.ರೂ. ಅನುದಾನ ಬಂದಿದೆ. ಪಂಚಾಯತ್ ನಿಧಿಯಡಿ 4.77 ಕೋ.ರೂ. ಕಾಮಗಾರಿ ನಡೆಸಲಾಗಿದೆ. 273 ಮಂದಿ ಒಟ್ಟು ಅರ್ಹ ನಿವೇಶನ ರಹಿತರಿದ್ದಾರೆ. ರಸ್ತೆ ಕಾಂಕ್ರೀಟ್, ತಡೆಗೋಡೆ, ಕಟ್ಟಡ ನಿರ್ಮಾಣ, ನೀರು ನಿರ್ವಹಣೆ, ಮೋರಿ ರಚನೆ ಸಹಿತ ಕಾಮಗಾರಿಗಳಿಗೆ 6.75 ಕೋ.ರೂ. ವ್ಯಯಿಸಲಾಗಿದೆ. ರಾಜ್ಯಸಭಾ ನಿಧಿಯಡಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಶೋಕನಗರ ಹಾಗೂ ಮುಳಿಕ್ಕಾರಿಗೆ 2.91 ಕೋ.ರೂ. ಮೀಸಲಿಡಲಾಗಿದೆ ಎಂದು ತಿಳಿಸಿದರು.

ಧರ್ಮಸ್ಥಳ ಗ್ರಾಮದಲ್ಲಿ ಅನಧಿಕೃತ ಮೃತದೇಹಗಳ ದಫನ ಮಾಡಲಾಗಿದೆ ಎಂದು ಅನೌಪಚಾರಿಕವಾಗಿ ದೂರು ನೀಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಧರ್ಮಸ್ಥಳ ಗ್ರಾ.ಪಂ. ವ್ಯಾಪ್ತಿಯಲ್ಲಿ 2000ನೇ ಇಸವಿಯಲ್ಲಿ ರುದ್ರಭೂಮಿ ಸ್ಥಾಪಿಸಲಾಗಿದೆ. ಅದಕ್ಕಿಂತ ಮುನ್ನ 1989 ರಿಂದಲೂ ಧರ್ಮಸ್ಥಳದಲ್ಲಿ ಸಿಕ್ಕ ಮೃತದೇಹಗಳ ಬಗ್ಗೆ ಪೊಲೀಸ್ ದಾಖಲೆಗಳಿವೆ. ಕಾನೂನಿನ ರೀತಿಯಲ್ಲೆ ನಾವು ವಾರೀಸುದಾರರಿಗೆ ನೋಟಿಸ್ ನೀಡಿ ಬಳಿಕವೇ ದಫನ ಮಾಡಲಾಗಿದೆ. ಅವುಗಳ ಅಧಿಕೃತ ಲೆಕ್ಕವಿದೆ ಎಂದು ತಿಳಿಸಿದರು.

ಗ್ರಾ.ಪಂ. ಅಧ್ಯಕ್ಷೆ ವಿಮಲಾ, ಪಿಡಿಒ ದಿನೇಶ್ ಎಂ., ಲೆಕ್ಕ ಸಹಾಯಕಿ ಪ್ರಮಿಳಾ, ಸದಸ್ಯೆ ಸುನಿತಾ, ವಸಂತ, ಹರ್ಷಿತ್ ಜೈನ್, ಹರೀಶ್, ಮುರಳೀದಾಸ್, ಸಿಬಂದಿ ದೇವಿಪ್ರಸಾದ್ ಬೊಳ್ಮ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article