
ಪಲ್ಗುಣಿ ಹೊಳೆಯಲ್ಲಿ ಯುವಕನ ಶವ ಪತ್ತೆ
Monday, July 7, 2025
ಉಜಿರೆ: ಆಳದಂಗಡಿಯ ಫಲ್ಗುಣಿ ನದಿಯಲ್ಲಿ ಯುವಕನ ಶವವೊಂದು ಪತ್ತೆಯಾಗಿದೆ.
ಅಳದಂಗಡಿ ಅರಮನೆ ಹಿಂಬದಿಯಲ್ಲಿ ಪಲ್ಗುಣಿ ನದಿಗೆ ಅಡ್ಡಲಾಗಿ ಇರುವ ಕಿಂಡಿ ಅಣೆಕಟ್ಟು ಬಳಿ ಸೋಮವಾರ ವ್ಯಕ್ತಿಯೊಬ್ಬರು ಮೀನು ಹಿಡಿಯಲೆಂದು ನದಿ ಬದಿಗೆ ತೆರಳಿದ ಸಂದರ್ಭ ಅವರಿಗೆ ಹೆಣವೊಂದು ಅಣೆಕಟ್ಟಿಗೆ ಸಿಲುಕಿಕೊಂಡಿರುವುದು ಗಮನಕ್ಕೆ ಬಂತು. ತಕ್ಷಣ ಅವರು ಸ್ಥಳೀಯರಿಗೆ ತಿಳಿಸಿದ್ದು, ಅವರು ವೇಣೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ.
ಮೃತ ಯುವಕ ದೇವರಗುಡ್ಡೆ ನಿವಾಸಿ ಸುದೀಪ್(25) ಎಂದು ಗುರುತಿಸಲಾಗಿದೆ.