
ಕುಸಿದು ಬಿದ್ದು ನವ ವಿವಾಹಿತ ಸಾವು
Thursday, July 10, 2025
ಉಳ್ಳಾಲ: ನವ ವಿವಾಹಿತನೊಬ್ಬ ಕುಸಿದು ಬಿದ್ದು, ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿರುವ ಘಟನೆ ಉಳ್ಳಾಲ ಮಂಜನಾಡಿಯಲ್ಲಿ ಸಂಭವಿಸಿದೆ.
ಮಂಜನಾಡಿ ಪೆರಡೆಯ ದಿ. ವೆಂಕಪ್ಪ ಹಾಗೂ ಪಾರ್ವತಿ ದಂಪತಿಯ ಪುತ್ರ ಭರತ್ (32) ಮೃತಪಟ್ಟಿರುವ ಯುವಕ. ಮಂಗಳೂರು ನಗರದ ಫಾರಮ್ ಮಾಲ್‌ನಲ್ಲಿ ಟೈಲರ್ ವೃತ್ತಿ ನಡೆಸುತ್ತಿದ್ದ ಭರತ್ ನಾಲ್ಕು ದಿನಗಳ ಹಿಂದೆ ತನ್ನ ಟೈಲರ್ ಶಾಪ್‌ನಲ್ಲಿದ್ದಾಗ ಕುಸಿದು ಬಿದಿದ್ದರು. ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಇಂದು ಸಾವನ್ನಪ್ಪಿದ್ದಾರೆ.
ಕಳೆದ ಎಪ್ರಿಲ್ ತಿಂಗಳ 22ರಂದು ಅವರ ವಿವಾಹ ನಡೆದಿದ್ದು ಪತ್ನಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದಾರೆ. ಭರತ್ ಅವರು ತಾಯಿ, ಪತ್ನಿ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.