
ಪೊಲೀಸ್ ಆಯುಕ್ತರಿಗೆ ಪುಸ್ತಕ ನೀಡಿ ಸ್ವಾಗತ
Wednesday, July 9, 2025
ಮೈಸೂರು: ಜೆ.ಪಿ. ನಗರ ಹಿರಿಯ ನಾಗರಿಕರ ಸಂಘ ಹಾಗೂ ಅಖಿಲ ಭಾರತೀಯ ಸಾರ್ವಜನಿಕ ಸಂಪರ್ಕ ಪರಿಷತ್ತು ಇವುಗಳ ಪರವಾಗಿ ಇತ್ತೀಚೆಗೆ ನಗರದ ಪೊಲೀಸ್ ಆಯುಕ್ತ (ಕಾನೂನು ಹಾಗೂ ಸುವ್ಯವಸ್ಥೆ)ರಾಗಿ ಅಧಿಕಾರ ಸ್ವೀಕರಿಸಿದ ಬಿಂದು ಮಣಿ ಅವರನ್ನು ಖ್ಯಾತ ಲೇಖಕ ಹಾಗೂ DRDO ಸಂಸ್ಥೆಯ ಮಾಜಿ ಪ್ರಧಾನ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಯಪ್ರಕಾಶ್ ರಾವ್ ಅವರು ತಾವು ಬರೆದ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರ ಜನ್ಮ ಚರಿತ್ರೆ ಅಗ್ನಿಯ ರೆಕ್ಕೆಗಳು ಪುಸ್ತಕ ನೀಡಿ ಸ್ವಾಗತಿಸಿದರು.
ರಾವ್ ಅವರು ರಾಜ್ಯ ಪೊಲೀಸ್ ಅಕಾಡೆಮಿ ಮೈಸೂರಿನ ಹಿರಿಯ ಗೌರವ ಶಿಕ್ಷಕರೂ ಆಗಿದ್ದಾರೆ.