ಎಸ್‌ಐಟಿ ಮುಂದೆ ಹಾಜರಾದ ಮತ್ತೋರ್ವ ದೂರುದಾರ

ಎಸ್‌ಐಟಿ ಮುಂದೆ ಹಾಜರಾದ ಮತ್ತೋರ್ವ ದೂರುದಾರ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಹಾಜರಾದ ಜಯಂತ್ ಟಿ. ಅವರು ತಾನು ನೋಡಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ.

ದೂರು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾನು ಸುಮಾರು 15 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಬಾಲಕಿಯ ಮೃತದೇಹವನ್ನು ನೋಡಿದ್ದೇನೆ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆ ನಡೆಸದೆ ಮೃತದೇಹವನ್ನು ಹೂತು ಹಾಕಿರುವುದಾಗಿ ತನಗೆ ಸ್ಪಷ್ಟವಾದ ಮಾಹಿತಿಯಿದೆ. ಈ ಬಗ್ಗೆ ದೂರು ನೀಡಿದ್ದೇನೆ, ಇನ್ನೂ ಇಂತಹ ಹಲವಾರು ಪ್ರಕರಣಗಳ ಬಗ್ಗೆ ದೂರು ನೀಡಲು ಜನರು ಸಿದ್ಧರಾಗಿದ್ದಾರೆ. ಅವರು ಒಂದೆರಡು ದಿನಗಳಲ್ಲಿ ಈ ಬಗ್ಗೆ ದೂರು ನೀಡಲಿದ್ದಾರೆ. ಒಟ್ಟಾರೆಯಾಗಿ ಎಸ್‌ಐಟಿ ತಂಡದ ಮೇಲೆ ವಿಶ್ವಾಸವಿರಿಸಿ ದೂರು ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article