
ಧರ್ಮಸ್ಥಳ ಪ್ರಕರಣ: 9, 10ನೇ ಜಾಗದಲ್ಲೂ ದೊರೆಯದ ಕಳೇಬರ ಕುರುಹು
ಮಂಗಳೂರು: ಧರ್ಮಸ್ಥಳ ಗ್ರಾಮದ ವಿವಿಧೆಡೆ ನೂರಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ದಳ (ಎಸ್ಐಟಿ)ದ ತನಿಖೆ ಮುಂದುವರೆದಿದ್ದು, ಇಂದು ಅಗೆದ 9 ಮತ್ತು 10ನೇ ಜಾಗದಲ್ಲಿ ಕಳೇಬರದ ಯಾವುದೇ ಅವಸೇಷ ಪತ್ತೆಯಾಗಿಲ್ಲ. ಇಂದಿನ ಕಾರ್ಯಾಚರಣೆ ಅಭತ್ಯಗೊಂಡಿದೆ.
ಇಂದು ಅರಣ್ಯ ಪ್ರದೇಶದಲ್ಲಿ ನಡೆದ ಅಗೆಯುವ ಪ್ರಕ್ರಿಯೆ ಹೊರಗೆ ಕಾಣಿಸದಂತೆ ದೂರುದಾರು ಗುರುತಿಸಿರುವ ರಸ್ತೆ ಬದಿಯಲ್ಲೇ ಇರುವ 9, 10ನೇ ಜಾಗಗಳನ್ನು ಪರದೆ ಕಟ್ಟಿ ಮುಚ್ಚಲಾಗಿತ್ತು.
ಎಸ್ಪಿ ದರ್ಜೆಯ ಅಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ ಸಹಿತ ಎಸ್ಐಟಿ ಅಧಿಕಾರಿಗಳ ಜೊತೆಗೆ ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಮಂಗಳೂರಿನ ಕೆಎಂಸಿ ವೈದ್ಯರ ತಂಡ, ಎಫ್.ಎಸ್.ಎಲ್. ತಂಡ, ಐ.ಎಸ್.ಡಿ. ಹಾಗೂ ಇತರ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಸ್ಥಗಿತ ಸಾಧ್ಯತೆ..
ಆ.3 ರಂದು ಉತ್ಖನನ ಕಾರ್ಯಾಚರಣೆ ನಡೆಯುವುದು ಬಹುತೇಕ ಅನುಮಾನವಾಗಿದೆ.ಭಾನುವಾರ ಆಗಿರುವ ಕಾರಣ ಇಲಾಖಾ ಅಧಿಕಾರಿಗಳಿಗೆ ರಜಾ ದಿನವಾಗಿದೆ. ಸರ್ಕಾರಿ ರಜಾ ದಿನದಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳು, ಅಧಿಕಾರಿಗಳಿಗೆ ರಜೆ ಇರಲಿದೆ. ಎಸಿ ಸೇರಿದಂತೆ ಕಂದಾಯ ಇಲಾಖೆ, ಎಫ್ ಎಸ್ ಎಲ್, ಸೋಕೋ ಅಧಿಕಾರಿಗಳಿಗೆ ರಜೆ ಇರಲಿದೆ. ಹೀಗಾಗಿ ಉತ್ಖನನ ಕಾರ್ಯಾಚರಣೆಗೆ ತೊಡಕಾಗಿದೆ.