ಮಾದಕ ದ್ರವ್ಯ ಸೇವನೆ ವಿರುದ್ಧ ಜಾಗೃತಿ: ಎಂಪಿಎಂ ಕಾಲೇಜಿನಲ್ಲಿ ‘ನಶೆ ಮುಕ್ತ ಭಾರತ’ ಕಾರ್ಯಕ್ರಮ
ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯ ಅಬಕಾರಿ ಅಧೀಕ್ಷಕರಾದ ಗುರುಮೂರ್ತಿ ಪಾಲೇಕರ್ ದೀಪ ಬೆಳಗಿಸಿ ಉದ್ಘಾಟಿಸಿ, ಬಳಿಕ ಮಾತನಾಡಿದ ಅವರು, ಯುವಕರು ಮಾದಕ ಪದಾರ್ಥಗಳಿಂದ ದೂರವಿದ್ದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪೂರಕರಾಗಬೇಕು ಎಂದು ಕರೆ ನೀಡಿದರು.
ಅಬಕಾರಿ ಉಪನಿರೀಕ್ಷಕರಾದ ರಾಘವೇಂದ್ರ ಅವರು ಮಾದಕ ಪದಾರ್ಥಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ವಿವರಿಸಿ, ಜಾಗೃತಿಯ ಅಗತ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಚಂದ್ರಾವತಿ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದರು. ಎನ್‌ಎಸ್‌ಎಸ್ ಅಧಿಕಾರಿ ಚಂದ್ರಕಾಂತ ಶೆಣೈ ಪ್ರಾಸ್ತಾವಿಕ ನುಡಿಗಳನ್ನು ನುಡಿದರು.
ಮಾದಕ ವಿರೋಧಿ ಘಟಕದ ಸದಸ್ಯೆ ಸೌಮ್ಯ ಹೆಚ್.ಕೆ. ಕಾರ್ಯಕ್ರಮದ ಔಚಿತ್ಯವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾರ್ಕಳ ವಲಯದ ಅಬಕಾರಿ ನಿರೀಕ್ಷಕ ರಮೇಶ್, ಸಿಬ್ಬಂದಿಗಳಾದ ಶಂಕರಾನಂದ, ಕೃಷ್ಣ ಆಚಾರ್ಯ, ಸುಭಾಷ್ ಮತ್ತು ಪ್ರಕಾಶ್, ಐಕ್ಯೂಎಸಿ ಸಂಚಾಲಕರಾದ ವಿನಯ್ ಎಂ.ಎಸ್, ಎನ್‌ಎಸ್‌ಎಸ್ ಅಧಿಕಾರಿ ರೇಣುಕಾ ಉಪಸ್ಥಿತರಿದ್ದರು.
ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಅನನ್ಯ ನಿರೂಪಿಸಿದರು. ದ್ವಿತೀಯ ಬಿಎ ವಿದ್ಯಾರ್ಥಿನಿ ಪ್ರೇಕ್ಷ ಶೆಟ್ಟಿ ಸ್ವಾಗತಿಸಿದರು. ಪ್ರಥಮ ಬಿಎ ವಿದ್ಯಾರ್ಥಿ ಹಿತೇಶ್ ಮತ್ತು ತಂಡ ಪ್ರಾರ್ಥನೆ ಸಲ್ಲಿಸಿದರು. ಪ್ರಥಮ ಬಿಕಾಂ ವಿದ್ಯಾರ್ಥಿನಿ ಯಜ್ಞೇಶ್ವರಿ ವಂದಿಸಿದರು.