ಸ್ಕೂಟರ್ ಡಿವೈಡರ್‌ಗೆ ಢಿಕ್ಕಿ ಸವಾರ ಮೃತ್ಯು

ಸ್ಕೂಟರ್ ಡಿವೈಡರ್‌ಗೆ ಢಿಕ್ಕಿ ಸವಾರ ಮೃತ್ಯು

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಮಾವಿನ ಕಟ್ಟೆಯಲ್ಲಿ ಸ್ಕೂಟರ್ ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ. 

ಪಚ್ಚಂಬಳ ದಿನಾರ್ ನಗರದ ಯೂಸಫ್ (20) ಮೃತಪಟ್ಟವರು. ಶಿರಿಯದ ಶಾಲೆಯೊಂದರಲ್ಲಿ ಓಣಂ ಕಾರ್ಯಕ್ರಮ ಪಾಲ್ಗೊಂಡು ಬಳಿಕ ಸ್ನೇಹಿತನನ್ನು ಮೊಗ್ರಾಲ್ ನ ಮನೆಗೆ ತಲುಪಿಸಿ ಪಚ್ಚಂಬಳ ದ ಮನೆಗೆ ಮರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article