ಆ.9 ರಂದು ಶ್ರಾವಣ ಹುಣ್ಣಿಮೆಯಂದು ಆನೆಗುಡ್ಡೆ ವಿನಾಯಕನಿಗೆ ಸ್ವರ್ಣ ಕಲಶಾಭಿಷೇಕ
Tuesday, August 5, 2025
ಕುಂದಾಪುರ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಆ.9 ರಂದು ಶ್ರಾವಣ ಹುಣ್ಣಿಮೆ ದಿನದಂದು ಬೆಳಗ್ಗೆ ಲೋಕಕಲ್ಯಾಣಾರ್ಥವಾಗಿ ಋತ್ವಿಜರಿಂದ ಸಹಸ್ರಾವರ್ತನ ಉಪನಿಷತ್ ಪಾರಾಯಣ ಪೂರ್ವಕ ಸ್ವರ್ಣಕಲಶಾಭಿಷೇಕ ಮತ್ತು ವಿಶೇಷ ಫಲಪಂಚಾಮೃತದೊಂದಿಗೆ ಮಧ್ಯಾಹ್ನ ಮಹಾಪೂಜೆ ನೆರವೇರಲಿದೆ.
ಭಕ್ತಭಿಮಾನಿಗಳಿಂದ ಸೀಯಾಳ (ಬೊಂಡ)ವನ್ನು ಆದರದಿಂದ ಸ್ವೀಕರಿಸಲಾಗುವುದು ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದೆ.