ಮನೆ ಕಳವು ಪ್ರಕರಣ: ನಾಲ್ವರು ಅಂತರಾಜ್ಯ ಕಳ್ಳರ ಬಂಧನ

ಮನೆ ಕಳವು ಪ್ರಕರಣ: ನಾಲ್ವರು ಅಂತರಾಜ್ಯ ಕಳ್ಳರ ಬಂಧನ


ಕುಂದಾಪುರ: ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸರಿಂದ ಬಂಧಿತ ನಾಲ್ವರು ಅಂತರಾಜ್ಯ ಕಳವು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಮಹಾರಾಷ್ಟ್ರ ಮೂಲದ ಸೊಲ್ಲಾಪುರ ಭಾಗದ ನಿವಾಸಿಗಳಾದ ಲಖನ್ ಕುಲಕರ್ಣಿ (31), ಸಂದೀಪ್ ಲವಟೆ (25), ವಿವೇಕ್ ಕುಂಬಾರ (26), ಅಜೀಜ್ ಯಾನೆ ಚೋಟೆ (28) ಬಂಧಿತ ಆರೋಪಿಗಳು.

ಇವರು ಕಳೆದ ಜು.19 ರಂದು ಕುಂದಾಪುರ ನಗರ ಠಾಣಾ ವ್ಯಾಪ್ತಿಯ ನಗರದ ಬಿಬಿ ರಸ್ತೆಯ ವೆಸ್ಟ್ ಬ್ಲಾಕ್‌ನಲ್ಲಿರುವ ರೋಹಿತ್ ಎಂಬವರ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಇನ್ನಿತರ ಸೊತ್ತುಗಳನ್ನು ಕಳವು ಮಾಡಿದ್ದರು. ಅದೇ ರೀತಿ ಕುಂದಾಪುರದ ಪಿ.ರವೀಂದ್ರ ಅವರ ಮನೆಗೆ ನುಗ್ಗಿ ಬೆಳ್ಳಿ, ಚಿನ್ನಾಭರಣ ಸೇರಿದಂತೆ ಒಟ್ಟು 4.57 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದರು. 

ಇದಲ್ಲದೆ ಇವರು ಹಳಿಯಾಳ ಠಾಣಾ ವ್ಯಾಪ್ತಿಯಲ್ಲೂ ನಡೆದ ಕಳ್ಳತನದಲ್ಲಿ ಭಾಗಿಯಾಗಿದ್ದು ಬಂಧನ ವೇಳೆ ಕುಂದಾಪುರ ದಲ್ಲಿ ನಡೆಸಿದ ಕಳವು ಕೃತ್ಯದ ಮಾಹಿತಿಯನ್ನು ವಿಚಾರಣೆ ವೇಳೆ ತಿಳಿಸಿದ್ದರು. ಅದರಂತೆ ಕುಂದಾಪುರ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಇವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬಂಧಿತರ ಪೈಕಿ ಸಚಿನ್ ಯಾನೆ ಲಖನ್ ವಿರುದ್ಧ ಕರ್ನಾಟಕದ ವಿವಿಧೆಡೆ 28 ಪ್ರಕರಣಗಳು, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಲ್ಲೂ ಪ್ರಕರಣ ದಾಖಲಾಗಿದ್ದು ೩ ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಅಜೀಜ್ ವಿರುದ್ಧ ಕರ್ನಾಟಕದಲ್ಲಿ 2 ಪ್ರಕರಣಗಳು, ಮಹಾರಾಷ್ಟ್ರದಲ್ಲಿಯೂ ಕೇಸು ದಾಖಲಾಗಿದೆ. ಸಂದೀಪ್ ವಿರುದ್ಧ ಮಹಾರಾಷ್ಟ್ರದಲ್ಲಿ ಸುಲಿಗೆ, ಕಳ್ಳತನ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article