ಸುಜಾತಾ ಭಟ್‌ಗೆ ಸಂಕಟ
Friday, August 29, 2025
ಮಂಗಳೂರು: ತನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾಳೆ ಎಂದು ಸುಳ್ಳು ಹೇಳಿ ಪ್ರಕರಣದಲ್ಲಿ ನನ್ನನ್ನು ಬಿಟ್ಟು ಬಿಡಿ, ಕೇಸ್ ವಾಪಾಸ್ ಪಡೆಯುತ್ತೇನೆ ಎಂದು ಗೋಗರೆದಿದ್ದ ಸುಜಾತಾ ಭಟ್‌ಗೆ ಸಂಕಟ ಎದುರಾಗಿದೆ.
ವಿಚಾರಣೆ ವೇಳೆ ಯುನೈಟೆಡ್ ಮೀಡಿಯಾ ಯೂ ಟ್ಯೂಬರ್ ಅಭಿಷೇಕ್ ಹೆಸರು ಹೇಳಿರುವ ಸುಜಾತಾ ಭಟ್ ಆತ ಹೇಳಿದಂತೆ ತಾನು ಹೇಳಿದ್ದೇನೆ ಎಂದಿದ್ದಾರೆ ಎನ್ನಲಾಗುತ್ತಿದೆ. ನಾಳೆಯೂ ಸುಜಾತಾ ಭಟ್‌ನ್ನು ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ಈ ನಡುವೆ ಅನನ್ಯಾ ಭಟ್ ಕುರಿತಂತೆ ಇರುವ ಸಾಕ್ಷ್ಯಗಳನ್ನು ಹಾಜರು ಪಡಿಸಲು ಸುಜಾತಾ ಭಟ್‌ಗೆ ಎಸ್‌ಐಟಿ ಸೂಚಿಸಿದ್ದು, ಇಲ್ಲವಾದಲ್ಲಿ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.