ಧರ್ಮಸ್ಥಳ ಪ್ರಕರಣ: ಸುಳ್ಳು ಹೇಳಿಕೆಗೆ 3.5 ರಿಂದ 4 ಲಕ್ಷ
ಮಂಗಳೂರು: ಧರ್ಮಸ್ಥಳ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿ ಸಾಕ್ಷಿ ದೂರುದಾರನಾಗಿ ಬಂದು ಬಂಧಿತನಾಗಿರುವ ಚಿನ್ನಯ್ಯನ ವಿಚಾರಣೆಯನ್ನು ಎಸ್‌ಐಟಿ ತೀವ್ರಗೊಳಿಸಿದ್ದು, ಸುಳ್ಳು ಹೇಳಿಕೆ ನೀಡಲು ಚಿನ್ನಯ್ಯಗೆ ಮೂರೂವರೆಯಿಂದ ನಾಲ್ಕು ಲಕ್ಷ ರೂ. ಹಣ ನೀಡಲಾಗಿದೆ ಎನ್ನಲಾಗುತ್ತಿದೆ.
ಹಣದ ಆಮಿಷ ನೀಡಿದ ತಂಡ ನಂತರ ಬೆದರಿಕೆ ಹಾಕಿದೆ ಎಂಬ ಅಂಶವನ್ನು ಚಿನ್ನಯ್ಯ ಎಸ್‌ಐಟಿ ಮುಂದೆ ಹೇಳಿದ್ದು ಆ ಕುರಿತು ತನಿಖೆ ನಡೆಯುತ್ತಿದೆ. ಅವರು ಹೇಳಿಕೊಟ್ಟಂತೆ ಹೇಳಿಕೆ ನೀಡಲು ನನನ್ನು ಸಂಪರ್ಕಿಸಿ 5, 10, 15 ಸಾವಿರದಂತೆ ಹಂತ ಹಂತವಾಗಿ ಹಣ ನೀಡಿದ್ದಾರೆ. ಸುಮಾರು ಮೂರುವರೆಯಿಂದ ನಾಲ್ಕು ಲಕ್ಷದವರೆಗೆ ಹಣ ಕೊಟ್ಟಿದ್ದಾರೆ. ಕೊನೆಯ ಹಂತದಲ್ಲಿ ನಾನು ಅವರಿಂದ ದೂರವಾಗಲು ತೀರ್ಮಾನಿಸಿದ್ದೆ. ಹೇಳಿದ ಹಾಗೆ ಕೇಳಿಲ್ಲದಿದ್ದರೆ ಕೇಸ್ ಹಾಕುತ್ತೇವೆ. ಜೀವಾವಧಿ ಶಿಕ್ಷೆ ಆಗುವ ಹಾಗೆ ಮಾಡುತ್ತೇವೆ ಎಂದು ಬೆದರಿಸಿದರು ಎಂದು ಚಿನ್ನಯ್ಯ ಹೇಳಿದ್ದಾನೆ.
ಬುರುಡೆ ಮೂಲ..
ತಾನು ತಂದ ತಲೆ ಬುರುಡೆಯನ್ನು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮನೆಯ ಆವರಣದಿಂದ ತರಲಾಗಿತ್ತು ಎಂದಿದ್ದಾನೆ. ತಲೆ ಬುರುಡೆಯನ್ನು ಭೂಮಿಯಿಂದ ಅಗೆದು ತಂದಿರುವ ವಿಡಿಯೋವನ್ನು ಕೂಡ ಮಾಡಲಾಗಿತ್ತು. ಆ ವಿಡಿಯೋವನ್ನು ತಿಮರೋಡಿಯ ತೋಟದಲ್ಲೇ ಮಾಡಲಾಗಿದೆ ಎನ್ನಲಾಗುತ್ತಿದೆ. ರಬ್ಬರ್ ತೋಟದ ಜಾಗ ತೋರಿಸಿ, ಇದೇ ಜಾಗದಿಂದ ತಲೆ ಬುರುಡೆ ತಂದಿದ್ದಾಗಿ ಚಿನ್ನಯ್ಯ ವಿಡಿಯೋದಲ್ಲಿ ಹೇಳಿದ್ದ. ವಿಡಿಯೋದಲ್ಲಿ ತೋರಿಸಿದ್ದ ಆ ಜಾಗ ತಿಮರೋಡಿಯ ರಬ್ಬರ್ ತೋಟದ ಜಾಗ ಎನ್ನಲಾಗಿದೆ. ಎಸ್‌ಐಟಿರಬ್ಬರ್ ತೋಟದ ಮಣ್ಣಿನ ಮಾದರಿಯನ್ನು ಸಂಗ್ರಹಿಸಿದ್ದಾರೆ.
ಮೊಬೈಲ್ ಶೋಧ..
ಚಿನ್ನಯ್ಯನ ಮೊಬೈಲ್ ಅನ್ನು ಎಸ್‌ಐಟಿ ಈಗಾಗಲೇ ವಶಕ್ಕೆ ಪಡೆದಿದೆ. ಫೋರೆನ್ಸಿಕ್ ತಜ್ಞರ ತಂಡದಿಂದ ಮೊಬೈಲ್ ಡಾಟಾವನ್ನು ರೀಟ್ರೀವ್ ಮಾಡಲಾಗುತ್ತಿದೆ. ಮೊಬ್ಥಕ್ ಫೊರೆನ್ಸಿಕ್ ಎಕ್ಸ್‌ಟ್ರಾಷನ್ ಟೂಲ್ಸ್ ಬಳಸಿ ಡೇಟಾ ಪಡೆಯಲಾಗುತ್ತಿದೆ. ಫೋನ್‌ನಲ್ಲಿದದ ನಂಬರ್, ಫೈಲ್ಸ್, ಮೆಸೇಜ್, ಚಾಟ್ಸ್ ಡೀಟೈಲ್ಸ್ ಅನ್ನು ಪಡೆಯಲಾಗುತ್ತಿದೆ. ಡಿವೈಸ್ ಮೆಮೊರಿ, ಡಿಲೀಟ್ ಆದ ಫೆಲ್‌ಗ್ಗಳವರೆಗೂ ಎಲ್ಲ ರಿಟ್ರೀವ್ ಆಗಲಿದೆ. ಮೊಬೈಲ್ ಗೂಗಲ್ ಡ್ರೈವ್, ಜಿ - ಮೇಲ್ ಡೇಟಾ ರಿಟ್ರೀವ್ ಮಾಡಲಾಗುತ್ತಿದೆ. ಫೋನ್ ರಿಟ್ರೀವ್ ಮಾಡಿದಾಗ ಸ್ಫೋಟಕ ಸಾಕ್ಷ್ಯಗಳು ಸಿಗುತ್ತಾವೆಯೇ ಎಂದು ಕಾದು ನೋಡಬೇಕಾಗಿದೆ.