.jpeg)
ಸ್ವಾತಂತ್ರ್ಯೋತ್ಸವ ಅಂಗವಾಗಿ ಆ.13ರಿಂದ 15ರವರೆಗೆ ದೇಶಾದ್ಯಂತ ‘ಹರ್ ಘರ್ ತಿರಂಗಾ’ ಅಭಿಯಾನ: ಹರಿಪ್ರಕಾಶ ಕೋಣೆಮನೆ
ಆ.13ರಂದು ಬೆಳಗ್ಗಿನವರೆಗೆ ಧ್ವಜಾರೋಹಣ ನಡೆಸಬಹುದು. ಆ.15ರಂದು ಸಂಜೆ 5ಕ್ಕೆ ಧ್ವಜಾವರೋಹಣ ನಡೆಸಬೇಕು. ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ, ಸೈನಿಕರಿಗೆ ಗೌರವ ಸಲ್ಲಿಸಬೇಕು. ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ಭಾಗವಹಿಸಿದವರು ಧ್ವಜದ ಜತೆ ಸೆಲಿ ತೆಗೆದು ಹರ್‌ಘರ್ ತಿರಂಗಾ ಆಪ್‌ನಲ್ಲಿ ಅಪ್‌ಲೋಡ್ ಮಾಡಲು ವಿನಂತಿಸಲಾಗಿತ್ತು. ಬುಧವಾರ ಬೆಳಗ್ಗಿನವರೆಗೆ ಒಂದು ಕೋಟಿಗೂ ಅಽಕ ಜನರು ಸೆಲಿ ಅಪ್‌ಲೋಡ್ ಮಾಡಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
79ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಆ.10ರಿಂದ 15ರವರೆಗೆ ಪ್ರತಿ ಗ್ರಾಮ, ಪಟ್ಟಣಗಳಲ್ಲಿ ಬಿಜೆಪಿ ವತಿಯಿಂದ ವಿವಿಧ ಮೋರ್ಚಾ, ಪ್ರಕೋಷ್ಠಗಳ ನೇತೃತ್ವದಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಆಪರೇಶನ್ ಸಿಂದೂರ ಯಶಸ್ಸಿನ ಹಿನ್ನೆಲೆಯಲ್ಲಿ ತಿರಂಗಾ ಯಾತ್ರೆ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಹಾಗೂ ಸೈನಿಕರಿಗೆ ಗೌರವ ನೀಡಲು ವಿಶೇಷ ಆದ್ಯತೆ ನೀಡಿದ್ದೇವೆ. ಆಪರೇಶನ್ ಸಿಂದೂರ ಮೂಲಕ ನಮ್ಮ ಸೈನಿಕರ ತಾಕತ್ತು ಜಗತ್ತಿಗೆ ತಿಳಿಸುವಂತಾಗಿದೆ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತಕಳ್ಳತನದ ಸುಳ್ಳು ಆರೋಪ ಮಾಡಿ, ಇಡೀ ದೇಶದಲ್ಲಿ ಗೊಂದಲ ಸೃಷ್ಟಿ ಮಾಡುವ ಷಡ್ಯಂತ್ರ ಮಾಡಿದ್ದಾರೆ. ರಾಹುಲ್ ಗಾಂಧಿ ತಮ್ಮ ಆರೋಪದ ಬಗ್ಗೆ ದಾಖಲೆ ನೀಡುತ್ತಾರೆ ಎಂಬ ನಿರೀಕ್ಷೆಯಿತ್ತು. ನಮ್ಮ ಆರೋಪವೇ ದಾಖಲೆ ಎಂಬ ಹಾರಿಕೆ ಉತ್ತರವನ್ನು ರಾಹುಲ್ ಗಾಂಧಿ ನೀಡಿದ್ದಾರೆ. ನಿರ್ದಿಷ್ಟ ಕ್ರಮದಲ್ಲಿ ಚುನಾವಣಾ ಆಯೋಗಕ್ಕೆ ಅಫಿದವಿತ್ ಸಲ್ಲಿಸುವ ಮೂಲಕ ದಾಖಲೆ ನೀಡುತ್ತಾರೆ ಎಂದು ಜನತೆ ನಿರೀಕ್ಷೆ ಮಾಡಿದ್ದರು. ಆದರೆ, ಯಾವುದೇ ದಾಖಲೆ ಬಿಡುಗಡೆ ಮಾಡದೇ, ನಿಯಮಾನುಸಾರ ಅಫಿದವಿತ್ ನೀಡದೆ ಪಲಾಯನ ಮಾಡಿರುವುದು ಇದುವರೆಗೆ ರಾಹುಲ್ ಗಾಂಧಿ ಅವರು ಮಾಡಿರುವ ಹಿಟ್ ಆಂಡ್ ರನ್ ಅಭಿಯಾನದ ಮುಂದುವರೆದ ಭಾಗ ಎಂದರು.
ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಗೌರವಕ್ಕೆ ಚ್ಯುತಿ ತರುವ ದುಸ್ಸಾಹಸಕ್ಕೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಮಾಡುತ್ತಿವೆ. ಚುನಾವಣಾ ಆಯೋಗದ ಮೇಲೆ ಆರೋಪ ಮಾಡಿ, ದಾಖಲೆ ನೀಡದೆ ರಾಹುಲ್ ಗಾಂಧಿ ಜಗತ್ತಿನ ಮುಂದೆ ಅವರನ್ನು ಅವರೇ ಬೆತ್ತಲುಗೊಳಿಸಿಕೊಂಡಿದ್ದಾರೆ. ದೇಶದ ಸ್ವಾತಂತ್ರ್ಯೋತ್ಸವದ ಸಂದರ್ಭ ನಮ್ಮ ಸ್ವಾತಂತ್ರ್ಯಕ್ಕೆ ಸಾಂವಿಧಾನಿಕ ಸಂಸ್ಥೆಗಳಿಗೆ ಜಗತ್ತಿನೆದುರು ಕಳಂಕ ತರುವ ಶಕ್ತಿಗಳನ್ನು ನಾವು ಹಿಮ್ಮೆಟ್ಟಿಸಬೇಕಾಗಿದೆ. ಈ ಷಡ್ಯಂತ್ರ ವಿಫಲಗೊಳಿಸಲು ಬಿಜೆಪಿ ಅಽಕೃತ ಅಂಕಿಸಂಖ್ಯೆಗಳನ್ನು ಈಗಾಗಲೇ ಬಿಡುಗಡೆಗೊಳಿಸಿದೆ ಎಂದರು.
ಬಿಜೆಪಿ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ರತನ್ ರಮೇಶ್ ಪೂಜಾರಿ, ಜಿಲ್ಲಾ ವಕ್ತಾರರಾದ ರಾಜಗೋಪಾಲ ರೈ, ಅರುಣ್ ಜಿ. ಶೇಟ್, ಜಿಲ್ಲಾ ಮಾಧ್ಯಮ ಸಂಚಾಲಕ ವಸಂತ ಪೂಜಾರಿ ಉಪಸ್ಥಿತರಿದ್ದರು.