
ಫಿಲೋಮಿನಾ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಏಂಜೆಲ್ ಜೆ.ಗೆ ಪ್ರಶಸ್ತಿ
Wednesday, August 13, 2025
ಪುತ್ತೂರು: ವರ್ಲ್ಡ್ ಕರಾಟೆ ಫೆಡರೇಷನ್, ಮೌಲಿ ಶೊಟೋಕನ್ ಕರಾಟೆ ಡು ಅಸೋಸಿಯೇಷನ್ ಇಂಡಿಯನ್ ಅಂಡ್ ಸೌತ್ ಏಷ್ಯನ್ ಸಂಯೋಜಿತ ಶೊಟೋಕನ್ ವರ್ಲ್ಡ್ ಕರಾಟೆ, ಶಿವಮೊಗ್ಗ ಸಿಟಿ ಕರಾಟೆ ಎಸೋಸಿಯೇಷನ್(ರಿ) ಇದರ ಆಶ್ರಯದಲ್ಲಿ ಶಿವಮೊಗ್ಗದ ನೆಹರು ಇಂಡೋರ್ ಸ್ಟೇಡಿಯಂನಲ್ಲಿ ಆಗಸ್ಟ್ 9 ಮತ್ತು 10 ರಂದು ನಡೆದ ಶಿವಮೊಗ್ಗ ಮುಕ್ತ ಕರಾಟೆ, ಆರನೇ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್-2025ನಲ್ಲಿ 17 ವರ್ಷದ ಬ್ರೌನ್-ಬ್ಲಾಕ್ ವಿಭಾಗದ ವೈಯಕ್ತಿಕ ಕಟಾ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಏಂಜೆಲ್ ಜೆ. ಅವರು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇವರು ಸಂಪಾಜೆ ನಿವಾಸಿ ಜೋಸೆಫ್ ಮತ್ತು ವಿಜಯಲಕ್ಷ್ಮಿ ದಂಪತಿಗಳ ಪುತ್ರಿ. ಇವರಿಗೆ ಚಂದ್ರಶೇಖರ್ ಕನಕ ಮಜಲು ತರಬೇತಿ ನೀಡುತ್ತಾರೆ.
ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಡಾ. ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.