ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕ-2025: ಯಾರಿಗೂ ಅನ್ಯಾಯವಾಗದಂತೆ ಸ್ಪಷ್ಟವಾಗಿ ಕಾನೂನು ರೂಪಿಸುವಂತೆ ಶಾಸಕ ಕಾಮತ್ ಆಗ್ರಹ

ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕ-2025: ಯಾರಿಗೂ ಅನ್ಯಾಯವಾಗದಂತೆ ಸ್ಪಷ್ಟವಾಗಿ ಕಾನೂನು ರೂಪಿಸುವಂತೆ ಶಾಸಕ ಕಾಮತ್ ಆಗ್ರಹ


ಮಂಗಳೂರು: ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕ-2025ಕ್ಕೆ ಸಂಬಂಧಿಸಿದಂತೆ ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರ್ ಗಳ ಪರಿಸ್ಥಿತಿಯೇನು? ತಿದ್ದುಪಡಿಯಿಂದ ಅವರು ಅತಂತ್ರರಾಗುವರೇ? ಈ ಬಗ್ಗೆ ಸರ್ಕಾರ ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಯಾರಿಗೂ ಅನ್ಯಾಯವಾಗದಂತೆ ಸ್ಪಷ್ಟವಾಗಿ ಕಾನೂನು ರೂಪಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಆಗ್ರಹಿಸಿದರು. 

2017 ರ ಅಧಿಸೂಚನೆಯಂತೆ ಡಿಪ್ಲೋಮ ಇನ್ ಸಿವಿಲ್ ಇಂಜಿನಿಯರಿಂಗ್ ಪಡೆದವರು ಸೂಪರ್ ವೈಸರ್ ಗಳಾಗಿದ್ದರು. ಈಗಿನ ತಿದ್ದುಪಡಿಯ ನಂತರವೂ ಅವರು ಸೂಪರ್ ವೈಸರ್ ಗಳಾಗಿಯೇ ಮುಂದುವರೆಯುತ್ತಾರೆಯೇ? ಅವರಿಗೆ ಈಗ 100 ಚದರ ಮೀ. ವರೆಗಿನ ಕಟ್ಟಡಗಳಿಗೆ ಮಾತ್ರ ಮೇಲ್ವಿಚಾರಣೆ ಮಾಡಲು ಅವಕಾಶವಿದೆ. ಆದರೆ ಗುಜರಾತ್, ತಮಿಳುನಾಡು, ಮತ್ತು ಮಹಾರಾಷ್ಟ್ರದಲ್ಲಿ ಅನುಭವದ ಆಧಾರದ ಮೇಲೆ ಹೆಚ್ಚಿನ ವ್ಯಾಪ್ತಿಗೆ ಅವಕಾಶ ನೀಡಲಾಗುತ್ತಿದೆ. 2025 ರ ತಿದ್ದುಪಡಿಯಲ್ಲಿ ಆ ಎಲ್ಲಾ ಸ್ಥಿತಿಗತಿಗಳು ಏನಾಗಲಿವೆ? ಎಂದು ಪ್ರಶ್ನಿಸಿದರು.

ಈ ಹಿಂದೆ ಅನುಭವಿ ಡಿಪ್ಲೋಮಾ ಇಂಜಿನಿಯರ್ಸ್ ಗಳಿಗೆ ಎತ್ತರದ ಕಟ್ಟಡಗಳ ಮೇಲ್ವಿಚಾರಣೆಗೂ ಅವಕಾಶವಿತ್ತು. ಈಗ 30 ವರ್ಷ ಅನುಭವ ಇದ್ದವರಿಗೂ ಇಂತಿಷ್ಟೇ ಎಂದು ಸೀಮಿತಗೊಳಿಸಿದರೆ ಹೇಗೆ? ಹೀಗಾದರೆ ಮಂಗಳೂರಿನಲ್ಲಿರುವ ಸಾವಿರಕ್ಕೂ ಮಿಕ್ಕಿ ಇಂಜಿನಿಯರ್ ಗಳು ಹಾಗೂ ಅವರ ಉದ್ಯೋಗಿಗಳು ಸಂಕಷ್ಟಕ್ಕೀಡಾಗುತ್ತಾರೆ.  ನಮ್ಮ ಪಾಲಿಕೆ ವ್ಯಾಪ್ತಿಯಲ್ಲಿ ಬಿ.ಇ ಇಂಜಿನಿಯರ್ ಗಳ ಕೊರತೆಯಾದಾಗೆಲ್ಲಾ, ಡಿಪ್ಲೋಮಾ ಇಂಜಿನಿಯರ್ಸ್ ಗಳು ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರವಹಿಸಿದ್ದು ಅವರನ್ನು ಕಡೆಗಣಿಸಬೇಡಿ. ಇದರಿಂದ ಮುಂದೆ ಆ ಕೋರ್ಸ್ ಗೆ ಬೇಡಿಕೆಯೇ ಇಲ್ಲದೇ ಕಾಲೇಜುಗಳು ಮುಚ್ಚುವ ಪರಿಸ್ಥಿತಿ ಬರಬಹುದು ಎಂದರು. ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವರು, ತಿದ್ದುಪಡಿಯ ನಂತರವೂ ಡಿಪ್ಲೋಮ ಇಂಜಿನಿಯರ್ಸ್ ಗಳನ್ನು ಪರಿಗಣಿಸುತ್ತೇವೆ. ಆದರೆ ಸದ್ಯಕ್ಕೆ ಅದಕ್ಕೊಂದು ಸ್ಪಷ್ಟ ನಿಯಮ ರೂಪಿಸಲಾಗಿಲ್ಲ, ಮುಂದಕ್ಕೆ ನೋಡುತ್ತೇವೆ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article