ಆ.25 ರಂದು ರಾಷ್ಟ್ರೀಯ ಮಟ್ಟದ ಪ್ರತಿಭಾ ಉತ್ಸವ ಅಲೋಶಿನ್ ಫೆಸ್ಟ್

ಆ.25 ರಂದು ರಾಷ್ಟ್ರೀಯ ಮಟ್ಟದ ಪ್ರತಿಭಾ ಉತ್ಸವ ಅಲೋಶಿನ್ ಫೆಸ್ಟ್

ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಒಂದು ದಿನದ ರಾಷ್ಟ್ರೀಯ ಮಟ್ಟದ ಪ್ರತಿಭಾ ಉತ್ಸವ ಅಲೋಶಿನ್ ಫೆಸ್ಟ್ 2025 ಆ.25ರಂದು ನಡೆಯಲಿದೆ.

ಬೆಳಗ್ಗೆ 9ಕ್ಕೆ ಎಲ್ಸಿಆರ್‌ಐ ಬ್ಲಾಕ್‌ನ ಎಲ್‌ಎಫ್ ರಸ್ಕಿನಾ ಸಭಾಂಗಣದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಉತ್ಸವ ಉದ್ಘಾಟಿಸುವರು. 

ಹಿರಿಯ ವಿದ್ಯಾರ್ಥಿ, ಚಿತ್ರನಟ ರಾಜ್ ದೀಪಕ್ ಶೆಟ್ಟಿ ಅತಿಥಿಯಾಗಿ ಭಾಗವಹಿಸುವರು. ಎಂದು ವಿವಿ ಕುಲಪತಿ ವಂ. ಡಾ. ಪ್ರವೀಣ್ ಮಾರ್ಟಿಸ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಹಬ್ಬಗಳ ಹಬ್ಬ’ ಹಾಗೂ ’ಸಾಂಸ್ಕೃತಿಕ ಹಬ್ಬ’ ಎಂಬ ಎರಡು ವಿಭಾಗಗಳಲ್ಲಿ ಉತ್ಸವ ಆಯೋಜಿಸಲಾಗುವುದು. ‘ಹಬ್ಬಗಳ ಹಬ್ಬ’ದಲ್ಲಿ ಒಟ್ಟು 31 ಸ್ಪರ್ಧೆಗಳು ನಡೆಯಲಿವೆ. ಕಲಾ ವಿದ್ಯಾರ್ಥಿಗಳಿಗೆ ಚರ್ಚೆ, ಚಿತ್ರಕಲೆ, ಮೊನೊಲಾಗ್, ರಸಪ್ರಶ್ನೆ,, ಫ್ಯಾಶನ್ ಶೋ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಮ್ಯಾನೇಜ್ಮೆಂಟ್ ರೊಡೀಸ್, ಬ್ಯುಸಿನೆಸ್ ಮ್ಯಾನೇಜರ್, ಬ್ಯುಸಿನೆಸ್ ರಸಪ್ರಶ್ನೆ, ಶಾರ್ಕ್ ಟ್ಯಾಂಕ್, ಬ್ರ್ಯಾಂಡ್ ಮ್ಯಾಡ್ ಆಡ್, ಬೆಸ್ಟ್ ಆಕೌಂಟೆಂಟ್, ಬೆಸ್ಟ್ ಮ್ಯಾನೇಜ್ಮೆಂಟ್ ಟೀಂ, ಮಾರ್ಕೆಟಿಂಗ್, ಪ್ರಾಡಕ್ಟ್ ಲಾಂಜ್, ಕಾರ್ಪರೇಟ್ ವಾಕ್, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸೈನ್ಸ್ ರಂಗೋಲಿ, ಸೈನ್ಸ್ ರಸಪ್ರಶ್ನೆ, ದಿ ಸೈನ್ಸ್ ಸ್ಟ್ಯಾಂಡ್ ಪಾಯಿಂಟ್, ಸೈನ್ಸ್ ಪಝಲ್, ಸೈನ್ಸ್ ಎಸ್ಕೆಪ್ ರೂಮ್, ಸೈನ್ಸ್ ಎಕ್ಸಿಬಿಶನ್, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಐಟಿ ಮ್ಯಾನೇಜರ್, ಫೋಟೋ ಆ?ಯಂಡ್ ವಿಡಿಯೋಗ್ರಫಿ, ಗೇಮಿಂಗ್ ಟೈಂ, ಕುಕ್ಕಿಂಗ್ ವಿಥೌಟ್ ಫೈರ್, ರೀಲ್ ಮೇಕಿಂಗ್, ಪೋಸ್ಟರ್ ಮೇಕಿಂಗ್, ಸಾಂಸ್ಕೃತಿಕ ಹಬ್ಬದಲ್ಲಿ ಶಾಸ್ತ್ರೀಯ ನೃತ್ಯ, ಫೇಸ್ ಪೈಂಟಿಂಗ್, ಮೆಹೆಂದಿ, ಕಸದಿಂದ ರಸ ಹಾಗೂ ಸಮೂಹ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು. 

ವಿವಿಧ ಕಾಲೇಜುಗಳ 1500 ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ, ಪ್ರತಿ ವೈಯಕ್ತಿಕ ವಿಭಾಗದ ವಿಜೇತ ವಿದ್ಯಾರ್ಥಿಗಳಿಗೆ ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ಫಲಕದೊಂದಿಗೆ ಗೌರವಿಸಲಾಗುವುದು. ಉತ್ತಮ ಪ್ರದರ್ಶನ ನೀಡಿದ ಕಾಲೇಜು ತಂಡಕ್ಕೆ ಸಮಗ್ರ ಫಲಕ ನೀಡಿ ಗೌರವಿಸಲಾಗುವುದು ಎಂದರು. 

ಸುದ್ದಿಗೋಷ್ಠಿಯಲ್ಲಿ ವಿವಿ ಕುಲಸಚಿವ ಡಾ. ಅಲ್ವಿನ್ ಡೆಸಾ, ಡಾ. ಭವ್ಯಾ ಶೆಟ್ಟಿ, ಡಾ. ಸ್ಮಿತಾ ಡಿ.ಕೆ., ಆನ್ಸನ್ ರೇಗೊ, ಶ್ರಾವಣಿ ಕೆ. ಭಟ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article