ಚಿನ್ನಯ್ಯನ ಸಹೋದರ ಸೆರೆ
ಮಂಗಳೂರು: ಮುಸುಕುಧಾರಿ ಚಿನ್ನಯ್ಯನ ಸಹೋದರ ತಾನಾಸಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ಬೆಳಗ್ಗೆ ತಾನಾಸಿ ಕೆಲಸಕ್ಕೆ ಹೋಗಿದ್ದರು. ಕೆಲಸ ಮಾಡುತ್ತಿದ್ದ ಜಾಗಕ್ಕೆ ತೆರಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಸ್‌ಐಟಿ ವಿಚಾರಣೆಯ ಸಂದರ್ಭದಲ್ಲಿ ಚಿನ್ನಯ್ಯ ಸಹೋದರ ತಾನಾಸಿಯ ಬಗ್ಗೆ ಕೆಲ ಮಾಹಿತಿ ತಿಳಿಸಿದ್ದ ಹಿನ್ನೆಲೆಯಲ್ಲಿ ಈಗ ಸಹೋದರನನ್ನು ವಶಕ್ಕೆ ಪಡೆದಿದೆ.
ಅನಾಟಮಿ ಬುರುಡೆ..
ಧರ್ಮಸ್ಥಳದ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿಸಲ್ಪಟ್ಟಿರುವ ಚಿನ್ನಯ್ಯನಿಗೆ ತಂಡವೊಂದು ವೈದ್ಯಕೀಯ ಕಾಲೇಜುಗಳಲ್ಲಿ ಪಾಠಕ್ಕೆ ಬಳಸುವ ‘ಅನಾಟಮಿ ಬುರುಡೆ’ಯನ್ನು ನೀಡಿರುವ ಅನುಮಾನ ವ್ಯಕ್ತವಾಗಿದೆ.
ಪ್ರಕರಣದಲ್ಲಿ ಸಾಕ್ಷಿಯಾಗಿ, ನಂತರ ಆರೋಪಿಯಾಗಿ ಬಂಧಿತನಾಗಿರುವ ಚಿನ್ನಯ್ಯ, ತಾನು ಹೂತುಹಾಕಿದ್ದ ಬುರುಡೆಯನ್ನು ಹೊರತೆಗೆದು ತನಿಖಾ ತಂಡಕ್ಕೆ ಹಸ್ತಾಂತರಿಸಿದ್ದ. ಆದರೆ, ಈ ಬುರುಡೆಯ ಮೂಲದ ಬಗ್ಗೆ ಆತ ನೀಡಿದ ಹೇಳಿಕೆಗಳು ಗೊಂದಲಮಯವಾಗಿದ್ದು, ತನಿಖಾಧಿಕಾರಿಗಳಿಗೆ ಅನುಮಾನ ಮೂಡಿಸಿವೆ. ತಂಡವೊಂದು ಈ ಅನಾಟಮಿ ಬುರುಡೆಯನ್ನು ಚಿನ್ನಯ್ಯನಿಗೆ ಕೊಟ್ಟು, ಅದನ್ನು ಮಣ್ಣಿನಲ್ಲಿ ಹೂತಂತೆ ಮಾಡಿ ವಿಡಿಯೋ ಚಿತ್ರೀಕರಿಸಿದ್ದಾರೆ ಎಂದು ಶಂಕಿಸಲಾಗಿದೆ.