ವೈದ್ಯರಾಗಲು ಕಠಿಣ ಪರಿಶ್ರಮ ಅತ್ಯಗತ್ಯ: ಡಾ. ಸಜ್ಜನ್ ಶೆಣೈ

ವೈದ್ಯರಾಗಲು ಕಠಿಣ ಪರಿಶ್ರಮ ಅತ್ಯಗತ್ಯ: ಡಾ. ಸಜ್ಜನ್ ಶೆಣೈ


ಮಂಗಳೂರು: ವೈದ್ಯರಾಗುವ ಕನಸನ್ನು ನನಸು ಮಾಡಲು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ ಮತ್ತು ಕಠಿಣ ಪರಿಶ್ರಮದ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಸಿದ್ಧ ಸಂಧಿವಾತಶಾಸ್ತ್ರಜ್ಞ ಮತ್ತು ರೋಗನಿರೋಧಕ ತಜ್ಞ ಡಾ. ಸಜ್ಜನ್ ಶೆಣೈ ಹೇಳಿದರು.

ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಕೇಂದ್ರದಲ್ಲಿ ‘ಎಜುಪಾತ್ ದಿ ಜರ್ನಿ ಆಫ್ ಸಕ್ಸಸ್’ ಸರಣಿ ಕಾರ್ಯಕ್ರಮದಡಿಯಲ್ಲಿ ‘ವೈದ್ಯರಾಗುವುದು ಹೇಗೆ’ ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು. 

ವೈದ್ಯಕೀಯ ಶಿಕ್ಷಣದ ಸಮಗ್ರ ಅವಲೋಕನ ಮಾಡಿದ ಅವರು, ಎಂಬಿಬಿಎಸ್‌ನಿಂದ ಸೂಪರ್-ಸ್ಪೆಷಾಲಿಟಿ ತರಬೇತಿ ವರೆಗಿನ ವೈದ್ಯಕೀಯ ಶಿಕ್ಷಣದ ಹಂತಗಳು ಮತ್ತು ವೈದ್ಯಕೀಯ ಅಭ್ಯಾಸದ ವಾಸ್ತವತೆಗಳನ್ನು ವಿವರಿಸಿದರು. ವೈದ್ಯಕೀಯವನ್ನು ವೃತ್ತಿಯಾಗಿ ಆಯ್ಕೆ ಮಾಡುವ ಕಾರಣಗಳು, ನೀಟ್ ಕಟ್-ಆಫ್ ಅಂಕಗಳು, ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳ ಕುರಿತು ಮಾಹಿತಿ ನೀಡಿದರು.

ವೈದ್ಯಕೀಯ ವೃತ್ತಿಯ ಸವಾಲುಗಳು ಮತ್ತು ಪ್ರಯೋಜನಗಳ ಕುರಿತು ಚರ್ಚಿಸಿದರು. 

ಕೋಚಿಂಗ್ ಮುಖ್ಯಸ್ಥ ಗುರುದತ್ತ ಎನ್., ಮತ್ತು ವಸತಿ ನಿಲಯದ ಮುಖ್ಯ ಮಾರ್ಗದರ್ಶಕಿ ಅನಿತಾ ಪಿ. ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಪ್ರೇರಣಾ ಪಾಟೀಲ್ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article