
ಪ್ರತೀ ಮಗುವಿಗೂ ಶಿಕ್ಷಣ ಸಮಾಜದ ಕರ್ತವ್ಯ: ಜಿಲ್ಲಾಧಿಕಾರಿ ದರ್ಶನ್.ಎಚ್.ವಿ.
ನಗರದ ಜೆಪ್ಪಿನಮೊಗರ್ನಲ್ಲಿರುವ ಪ್ರೆಸ್ಟೀಜ್ ಇಂಟನ್ಯಾಶನಲ್ ಸ್ಕೂಲ್ನಲ್ಲಿ ರವಿವಾರ ನಡೆದ ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎಫ್) ವತಿಯಿಂದ ವಿದ್ಯಾರ್ಥಿ ವೇತನ ಮತ್ತು ಹೊಲಿಗೆ ಯಂತ್ರಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾತನಾಡಿ ‘ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟರೆ ಅವರು ಕಾಲ ಮೇಲೆ ನಿಲ್ಲತ್ತಾರೆ. ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದರೆ ಅವರಿಗೆ ಸ್ವಾವಲಂಭಿಯಾಗಲು ಸಾಧ್ಯವಾಗುತ್ತದೆ. ಅವರ ಮೂಲಕ ಇಡೀ ಕುಟುಂಬ ಬೆಳಗುತ್ತದೆ. ಹೀಗಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಕರೆ ನೀಡಿದರು. ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎಂ.ಫಾರೂಕ್, ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ ಮಾತನಾಡಿದರು.
ಶೈಕ್ಷಣಿಕ ಕಾರ್ಯಾಗಾರ:
ಇದೇ ಸಂದರ್ಭದಲ್ಲಿ ಯುಎಇ ಲಂಡನ್ ಅಮೆರಿಕನ್ ಸಿಟಿ ಕಾಲೇಜಿನ ಉಪಕುಲಪತಿ ಮತ್ತು ಬಿಸಿಎಫ್ನ ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮುಹಮ್ಮದ್, ಮನಾಲ್ ಕಾಪು ಮತ್ತು ರಫೀಕ್ ಮಾಸ್ಟರ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರ ನಡೆಸಿಕೊಟ್ಟರು.
ಅಲೈಡ್ ಹೆಲ್ತ್ ಕೇರ್ ಆಯೋಗದ ರಾಜ್ಯ ಅಧ್ಯಕ್ಷ ಡಾ. ಯು.ಟಿ. ಇಫ್ತಿಕಾರ್, ಯುಎಇ ಗಡಿಯಾರ್ ಗ್ರೂಪ್‌ನ ಚೇರ್ಮೇನ್ ಇಬ್ರಾಹೀಂ ಗಡಿಯಾರ್, ಕೆನರಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್‌ನ ಮಾಜಿ ಅಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್, ಉದ್ಯಮಿ ಅಬ್ದುಲ್ ರವೂಫ್, ಸಿ.ಆರ್. ಫ್ರುಟ್ಸ್ನ ಅಧ್ಯಕ್ಷ ಸಿ.ಆರ್.ಅಬೂಬಕರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಲತೀಫ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ಶಾಖೆಯ ಮ್ಯಾನೇಜರ್ ರಹ್ಮತ್ ಎಸ್.ಎ, ಮಾಜಿ ಉಪ ಮೇಯರ್ ಬಶೀರ್ ಬೈಕಂಪಾಡಿ, ಸಾಹಿತಿಗಳಾದ ಮುಹಮ್ಮದ್ ಕುಳಾಯಿ, ಮುಹಮ್ಮದ್ ಅಲಿ ಕಮ್ಮರಡಿ ಮುಖ್ಯ ಅತಿಥಿಯಾಗಿದ್ದರು.
ಮೀಫ್ ಪ್ರಧಾನ ಕಾರ್ಯದರ್ಶಿ ರಿಯಾದ್ ಅಹ್ಮದ್ ಕೆ.ಬಿ, ಬಿಸಿಎಫ್ ಮುಖ್ಯ ಸಲಹೆಗಾರ ಇಬ್ರಾಹೀಂ ಗಡಿಯಾರ್, ಉಪಾಧ್ಯಕ್ಷರಾದ ಹಫೀಕ್ ಹುಸೈನ್, ಅಮೀರುದ್ದೀನ್ ಎಸ್.ಐ, ಕೋಶಾಧಿಕಾರಿ ಅಸ್ಲಂ ಕಾರಾಜೆ , ಯಾಕೂಬ್ ದೇವ ಉಪಸ್ಥಿತರಿದ್ದರು.
ಬಿಸಿಎಫ್ ಸ್ಕಾಲರ್ಶಿಪ್ ಕಮಿಟಿಯ ಅಧ್ಯಕ್ಷ ಎಂ.ಇ. ಮೂಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮುಹಮ್ಮದ್