
ರಾಜಕೇಸರಿ ಸೇವಾ ಟ್ರಸ್ಟ್‌ನಿಂದ ಭಗಿನಿ ಸಮಾಜದ ಸಹೋದರಿಯರೊಂದಿಗೆ ‘ರಕ್ಷಾಬಂಧನ ಸಂಭ್ರಮ’ ಕಾರ್ಯಕ್ರಮ
ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಂತೋಷ್ ಕೊಲ್ಯ ಪ್ರಸ್ತಾವಿಕ ನುಡಿಗಳನ್ನಾಡಿದರು.
ಮಂಗಳೂರು ಮಹಾನಗರ ಸಾಮರಸ್ಯ ಟೋಳಿ ಸದಸ್ಯ ಪ್ರಸಾದ್ ಕಣ್ಣೂರ್ ಅವರು ಪ್ರಧಾನ ಭಾಷಣಗಾರರಾಗಿ ಉಪಸ್ಥಿತರಿದ್ದು, ರಕ್ಷಾಬಂಧನ ಆಚರಣೆಯ ಮೌಲ್ಯ ಮತ್ತು ಔಚಿತ್ಯದ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದ ಭಗಿನಿ ಸಮಾಜದ ಅಧ್ಯಕ್ಷೆ ರತ್ನಾ ಟಿ. ಆಳ್ವ ಅವರು ಇಂತಹ ಕಾರ್ಯಕ್ರಮಗಳು ಸಹೋದರತ್ವ, ಸಾಮರಸ್ಯ ಮತ್ತು ಸ್ವಾಭಿಮಾನದ ಸಂಕೇತವೆಂದು ಬಣ್ಣಿಸಿದರು.
ಭಗಿನಿ ಸಮಾಜದ ಉಪಾಧ್ಯಕ್ಷೆ ಚಿತ್ರಾ ಪ್ರಭು, ಸಾಮಾಜಿಕ ಸೇವಾಕರ್ತೆ ಶಬರಿ ನಿತಿನ್ ಶೆಟ್ಟಿ, ಸಂಸ್ಥೆಯ ಜಿಲ್ಲಾ ಸಂಚಾಲಕ ಪ್ರಸಾದ್ ಕುಲಾಲ್ ಮತ್ತು ಬೆಳ್ತಂಗಡಿ ಘಟಕದ ಅಧ್ಯಕ್ಷ ಸತೀಶ್ ಕಂಗಿತ್ತಿಲು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕುಲಾಲ್ ಮಂಗಳಾದೇವಿ ಸ್ವಾಗತಿಸಿ, ಸಂಸ್ಥೆಯ ಸಹ ಸಂಘಟನಾ ಕಾರ್ಯದರ್ಶಿ ವರುಣ್ ಕುಮಾರ್ ಬಪ್ಪನಾಡು ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಕೋಶಾಧಿಕಾರಿ ಪ್ರವೀಣ್ ಕುಲಾಲ್ ವಂದಿಸಿದರು.
ನೆರೆದವರೆಲ್ಲರೂ ಪರಸ್ಪರ ರಕ್ಷೆಯನ್ನು ಕಟ್ಟುವ ಮೂಲಕ ಸಂಭ್ರಮಿಸಿದರು.