ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆಗುತ್ತಿದೆ: ನಿಖಿಲ್ ಕುಮಾರಸ್ವಾಮಿ

ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆಗುತ್ತಿದೆ: ನಿಖಿಲ್ ಕುಮಾರಸ್ವಾಮಿ


ಮಂಗಳೂರು: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆಗುತ್ತಿದೆ. ದೇವಸ್ಥಾನದ ಹೆಸರನ್ನು ಅಪಪ್ರಚಾರ ಮಾಡುತ್ತಿದ್ದಾರೆ. ಆ ಅಪಪ್ರಚಾರವನ್ನು ತಡೆಯು ಸಲುವಾಗಿ ಹಾಗೂ ಧರ್ಮ ಉಳಿಯಬೇಕು ಎಂದು ಯಾತ್ರೆ ಮಾಡಿದ್ದೆವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಅವರು ಇಂದು ಧಮಸ್ಥಳ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ್ ಸ್ವಾಮಿಯ ದರ್ಶನ ಪಡೆದು ಬಳಿಕ ಮಾಧ್ಯಮದ ಜೊತೆ ಮಾತನಾಡಿ, ದೇವರ ದರ್ಶನವನ್ನು ಪಡೆದಿದ್ದೆವೆ. ಇಲ್ಲಿಗೆ ಹಾಲಿ ಮತ್ತು ಮಾಜಿ ಎಂಎಲ್‌ಎ, ಎಂಎಲ್‌ಸಿಗಳು ಎಲ್ಲಿಗೆ ಬಂದಿದ್ದಾರೆ. ನಾವೆಲ್ಲ ಚಿಕ್ಕವಯಸ್ಸಿನಿಂದಲೂ ಮಂಜುನಾಥ ಸ್ವಾಮಿ ದರ್ಶನ ಪಡೆಯುತ್ತಿದ್ದೆನೆ. ನಾವು ಯಾವುದೇ ರಾಜಕೀಯ ಮಾಡಲು ಈ ಯಾತ್ರೆ ಯಾತ್ರೆ ಮಾಡಿಲ್ಲ ಎಂದರು.

ಈ ರೀತಿಯ ಅಪಪ್ರಚಾರದಿಂದ ಧರ್ಮಾಧಿಕಾರಿಗಳ ಮನಸ್ಸಿನ ಮೇಲೆ ಬೇಸರ, ನೋವು ಆಗಿದ್ದರೂ, ತೋರಿಸಿಕೊಳ್ಳುತ್ತಿಲ್ಲ. ಭಗವಂತ ಅವರಿಗೆ ಆ ಶಕ್ತಿ ಕೊಟ್ಟಿದ್ದಾನೆ. ಈಗಾಗಲೇ ಹೆಚ್.ಡಿ. ಕುಮಾರಸ್ವಾಮಿ ಅವರು ಹೆಗ್ಗಡೆಯವರಿಗೆ ಕರೆ ಮಾಡಿ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

ಈ ವಿಚಾರದಲ್ಲಿ ಷಡ್ಯಂತ್ರ ಪದ ಬಳಕೆ ಮಾಡಿದ್ದು ನಾವಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈ ಪದ ಬಳಕೆ ಮಾಡಿದ್ದಾರೆ ಎಂದು ಹೇಳಿದ ಅವರು ಸರ್ಕಾರ ಎಸ್‌ಐಟಿ ತರಾತುರಿಯಲ್ಲಿ ರಚನೆ ಆಗಬಾರದಿತ್ತು ಎಂದು ಎಲ್ಲಾ ಹೇಳುತ್ತಾರೆ. ಇದರೊಂದಿಗೆ ಕ್ಷೇತ್ರದ ಗೌರವ ಕಳೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ದೂರುದಾರ ಬುರುಡೆ ತಂದಾಗ ಅವನನ್ನು ತನಿಖೆ ಮಾಡಬೇಕಿತ್ತು. ಆದರೆ ಅದನ್ನು ಸರ್ಕಾರ ಮಾಡಿಲ್ಲ. ಇದನ್ನು ನೋಡಿದರೆ ಒಬ್ಬರು ಇಬ್ಬರು ಇಲ್ಲ. ದೊಡ್ಡ ಸಂಸ್ಥೆಗಳೇ ಇದರ ಹಿಂದೆ ಇದೆ ಎಂದು ಆರೋಪಿಸಿದರು.

ಕೆಲವು ಯೂಟ್ಯೂಬ್‌ಗೆ ವಿದೇಶದಿಂದ ಹಣ ಬಂದಿದೆ. ಆದುದರಿಂದ ಕೇಂದ್ರದ ತನಿಖಾ ಸಂಸ್ಥೆಯಿಂದ ಈ ಪ್ರಕರಣದ ತನಿಖೆ ಆಗಬೇಕು ಎಂಬುವುದು ಸಂಪೂರ್ಣ ಜೆಡಿಎಸ್ ಪಕ್ಷದ ಆಗ್ರಹವಾಗಿದೆ ಎಂದರು.

ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಲೋಕಸಭಾ ಸದಸ್ಯ ಮಲ್ಲೇಶ್ ಬಾಬು, ಶಾಸಕರಾದ ಹರೀಶ್ ಗೌಡ, ಸ್ವರೂಪ್ ಪ್ರಕಾಶ್, ಕರೇಯಮ್ಮ ನಾಯಕ್, ಶಾರದಾ ಪೂರ್ಯನಾಯ್ಕ, ಬಾಲಕೃಷ್ಣ, ಮಂಜುನಾಥ್, ನೇಮಿರಾಜ್ ನಾಯಕ್, ರಾಜ್ಯ ಕೋರ ಕಮೀಟಿ ಸದಸ್ಯ ವೆಂಕಟರಾವ್ ನಾಡಗೌಡ, ವಿಧಾನಪರಿಷತ್ ಸದಸ್ಯ ಬೋಜೆಗೌಡ, ಮಾಜಿ ಶಾಸಕರಾದ ಸುರೇಶ್ ಗೌಡ, ಹೆಚ್.ಕೆ. ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯೆ ಇಂಚರಾ ಗೋವಿಂದರಾಜು, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಹರಿಹರ ಮಾಜಿ ಶಾಸಕರಾದ ಹೆಚ್. ಸಿದ್ದಲಿಂಗೇಶ್, ಬಾದಮಿಯ ಹನಮಂತಪ್ಪ ಮಾವಿನಮರದ, ಅಪ್ಪುಗೌಡ, ಶಾರದಾ ಅಪ್ಪಾಜಿಗೌಡ, ಮಾಜಿ ವಿಧಾನಪರಿಷತ್ ಸದಸ್ಯರಾದ ತುಪಲ್ಲಿ ಚೌಡರೆಡ್ಡಿ, ಸಿ.ವಿ. ಚಂದ್ರಶೇಖರ, ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಮಾಜಿ ವಿಧಾನಪರಿಷತ್ ಸದಸ್ಯ ರಮೇಶ್ ಗೌಡ, ಮನ್ ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರ, ಮೈಮುಲ್ ಮಾಜಿ ಅಧ್ಯಕ್ಷ ಪ್ರಸನ್ ಕುಮಾರ್, ಮುಖಂಡರಾದ ಎನ್.ಆರ್. ಸಂತೋಷ, ಸಿರಾ ಉಗ್ರೇಶ್, ಹಿರಿಯೂರು ಮಹಿಂದ್ರಪ್ಪ ಸೇರಿದಂತೆ ಮಾಜಿ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಪಕ್ಷದ ಮುಖಂಡರು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತ ಬಂಧುಗಳು, ಸಹಸ್ರರಾರು ಭಕ್ತರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article