ದಕ್ಷಿಣ ಕನ್ನಡದ ಹೆಸರು ಮಂಗಳೂರು ಎಂದಾಗಲಿ: ಅಧಿವೇಶನದಲ್ಲಿ ಆಗ್ರಹಿಸಿದ ಶಾಸಕ ಕಾಮತ್

ದಕ್ಷಿಣ ಕನ್ನಡದ ಹೆಸರು ಮಂಗಳೂರು ಎಂದಾಗಲಿ: ಅಧಿವೇಶನದಲ್ಲಿ ಆಗ್ರಹಿಸಿದ ಶಾಸಕ ಕಾಮತ್


ಮಂಗಳೂರು: ಕೇವಲ ಒಂದೆರಡು ತಿಂಗಳಲ್ಲಿಯೇ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಲು ತೋರಿದ ಉತ್ಸಾಹವನ್ನು ದಕ್ಷಿಣಕನ್ನಡದ ಹೆಸರನ್ನು ಮಂಗಳೂರು ಎಂದು ಬದಲಿಸುವಲ್ಲಿಯೂ ರಾಜ್ಯ ಸರ್ಕಾರ ತೋರಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಅಧಿವೇಶನದಲ್ಲಿ ಆಗ್ರಹಿಸಿದರು.

ಗಮನ ಸೆಳೆಯುವ ವೇಳೆ ನಡೆದ ಚರ್ಚೆಯಲ್ಲಿ ಮಾತನಾಡಿದ ಶಾಸಕರು, ಸದರಿ ವಿಷಯಕ್ಕೆ ಸಂಬಂಧಿಸಿದಂತೆ ದ.ಕ ಜಿಲ್ಲಾಧಿಕಾರಿಗಳಿಂದ ವರದಿ ಬರಲು ಬಾಕಿ ಇದ್ದು ಪ್ರಸ್ತಾವನೆ ಸ್ವೀಕೃತಗೊಂಡಿರುವುದಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ ಆ ಪ್ರಸ್ತಾವನೆ ಸಲ್ಲಿಕೆಯಾಗಲು ಸರ್ಕಾರದಿಂದ ಪೂರಕವಾದ ವಾತಾವರಣ ಸೃಷ್ಟಿಯಾಗಬೇಕು ಹೊರತು ತಾನಾಗಿಯೇ ಬರುವುದಿಲ್ಲ.

ಪರಶುರಾಮ ಸೃಷ್ಟಿಯಾದ ತುಳುನಾಡಿನಲ್ಲಿ ತಾಯಿ ಮಂಗಳಾಂಬಿಕೆಯಿಂದ ಮಂಗಳೂರು ಹೆಸರು ಬಂದಿದೆ. ಆ ಹೆಸರಿನಿಂದ ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್‌ ಮಂಗಳೂರು ಸೃಷ್ಟಿಸಲು ಅನುಕೂಲವಾಗುತ್ತದೆ. ಉಡುಪಿ, ಹಾಸನ, ಬೆಂಗಳೂರು, ತುಮಕೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಂತೆ ನಮ್ಮ ಜಿಲ್ಲೆಗೆ ಮಂಗಳೂರು ಹೆಸರು ಅಧಿಕೃತವಾಗಲಿ. ಉತ್ತರಕನ್ನಡಕ್ಕೂ ಇದೇ ಸಮಸ್ಯೆಯಿದ್ದು ಅವರೂ ಸಹ ಬೇಕಿದ್ದರೆ ಬೇಡಿಕೆ ಸಲ್ಲಿಸಬಹುದು. ಬ್ರಿಟಿಷರು, ಪೋರ್ಚುಗೀಸರು ಭಾರತವನ್ನು ಬಿಟ್ಟು ಹೋಗಿಯಾಗಿದೆ. ಅದರ ಜೊತೆಗೆ ಅವರ ದಾಸ್ಯದ ಮಾನಸಿಕತೆ ನೆನಪಿಸುವ ಹೆಸರುಗಳು ಸಹ ಹೋಗಬೇಕಿದ್ದು, ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article