ಕೆ.ಎನ್. ರಾಜಣ್ಣ ಸಹಕಾರ ಸಚಿವ ಹುದ್ದೆಯಿಂದ ತೆರವಾಗಿರುವುದು ವಿಷಾದ

ಕೆ.ಎನ್. ರಾಜಣ್ಣ ಸಹಕಾರ ಸಚಿವ ಹುದ್ದೆಯಿಂದ ತೆರವಾಗಿರುವುದು ವಿಷಾದ

ಮಂಗಳೂರು: ಸಹಕಾರ ರಂಗದ ಹಿರಿಯ ನಾಯಕರಾಗಿ ರಾಜ್ಯದಲ್ಲಿ ಸಹಕಾರ ಕ್ಷೇತ್ರಕ್ಕೆ ಹೊಸ ಸಂಚಲನವನ್ನು ಮೂಡಿಸಿದ್ದ ಕೆ.ಎನ್. ರಾಜಣ್ಣ ಅವರನ್ನು ಸಹಕಾರ ಸಚಿವ ಹುದ್ದೆಯಿಂದ ತೆರವುಗೊಳಿಸಿರುವುದಕ್ಕೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ನನಗೆ ಕೆ.ಎನ್. ರಾಜಣ್ಣ ಅವರೊಂದಿಗೆ ಸುಮಾರು ೨೮ ವರ್ಷಗಳ ಒಡನಾಟವಿದೆ. ಅವರು ಸಹಕಾರ ಕ್ಷೇತ್ರವನ್ನು ತಳಮಟ್ಟದಿಂದಲೇ ತಿಳಿದುಕೊಂಡವರು. ಅವರು ಗ್ರಾಮಮಟ್ಟದ ಸಹಕಾರ ಸಂಘಗಳಿಗೂ ಪ್ರಾಧಾನ್ಯತೆಯನ್ನು ನೀಡುತ್ತಿದ್ದರು. ಇದರಿಂದಾಗಿ ರಾಜ್ಯದಲ್ಲಿ ಸಹಕಾರ ಕ್ಷೇತ್ರ ಭದ್ರ ನೆಲೆಯನ್ನು ಕಂಡಿದೆ. ಹಾಗೂ ಸಹಕಾರ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಸಾಧಿಸಿತ್ತು. ಅವರ ತೆರವಾದ ಸ್ಥಾನದಿಂದ ಸಹಕಾರ ಕ್ಷೇತ್ರಕ್ಕೆ ಆಘಾತವನ್ನು ತಂದಿದೆ.

ಸಹಕಾರ ಕ್ಷೇತ್ರದಲ್ಲಿ ಅವಿರತ ಸೇವೆಯನ್ನು ಸಲ್ಲಿಸುತ್ತಿದ್ದ ಇವರ ಸೇವೆ ರಾಜ್ಯಕ್ಕೆ ಇನ್ನೂ ಅಗತ್ಯವಿತ್ತು. ಇವರು ಸಹಕಾರ ಸಚಿವ ಹುದ್ದೆಯಿಂದ ತೆರವಾಗಿರುವುದು ವಿಷಾದವನ್ನು ತಂದಿದೆ ಎಂದು ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಹೇಳಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article